ಬೆಳಗಾವಿ : ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (BCCI) ನೂತನ ಅಧ್ಯಕ್ಷರು ಹಾಗೂ 2026-27ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಆಗಸ್ಟ್ 7, ಶುಕ್ರವಾರ ಸಂಜೆ 7 ಗಂಟೆಗೆ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಸ್ವಪ್ನಿಲ್ ಶಾ ಅವರು ಚೆಂಬರ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಉದಯ ಜೋಶಿ ಹಿರಿಯ ಉಪಾಧ್ಯಕ್ಷರಾಗಿ, ರಾಜೇಂದ್ರ ಮುತಗೆಕರ್ ದ್ವಿತೀಯ ಉಪಾಧ್ಯಕ್ಷರಾಗಿ, ಮನೋಜಕುಮಾರ್ ಎನ್. ಮತ್ತಿಕೊಪ್ಪ ಗೌರವ ಕಾರ್ಯದರ್ಶಿಯಾಗಿ, ವಿನಿತ್ ಹರಕುಣಿ ಜಂಟಿ ಗೌರವ ಕಾರ್ಯದರ್ಶಿಯಾಗಿ ಹಾಗೂ ರಮೇಶ್ ಲದ್ದಡ್ ಖಜಾಂಚಿಯಾಗಿ ಪದಗ್ರಹಣ ಮಾಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಭಾಗವಹಿಸಲಿದ್ದು, ಗೋವಾ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷೆ ಪ್ರತಿಭಾ ಧೋಂಡ್ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿರುವರು.
2026-27ರ ಆಡಳಿತ ಮಂಡಳಿ ಸದಸ್ಯರಾಗಿ ಸಂಜೀವ್ ಕತ್ತಿಶೆಟ್ಟಿ, ರೋಹಿತ್ ಎಸ್. ಕಪಾಡಿಯಾ, ವಿಕ್ರಂ ಜೈನ್, ಪ್ರಶಾಂತ್ ಕಳ್ಳಿಮನಿ, ಅಪ್ಪಾಸಾಹೇಬ್ ಗುರವ್, ಸಂಜಯ್ ಪೋದ್ದಾರ್, ವಿಜಯ್ ದರಗಶೆಟ್ಟಿ, ಸಚಿನ್ ಹಂಗಿರ್ಗೇಕರ್, ವೈಭವ್ ವೆರ್ಣೇಕರ, ಎಂ. ಕೆ. ಹೆಗಡೆ, ನಿತಿನ್ ಪೊರ್ವಾಲ್, ಸುಧೀರ್ ಡಿ. ಚೌಗುಲೆ, ಸಚಿನ್ ಸಬ್ನಿಸ್, ಸತೀಶ್ ಕುಲಕರ್ಣಿ, ರಾಜೇಶ್ ಮುಚಂಡಿಕರ್, ಅಶೋಕ್ ಕೋಳಿ, ಆನಂದ ದೇಸಾಯಿ, ಸಂದೀಪ್ ಬಾಗೇವಾಡಿ ಹಾಗೂ ದಯಾನಂದ ನೇತಲ್ಕರ್, ಬಸವರಾಜ್ ರಾಂಪುರೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಧಿಕಾರ ಪದಗ್ರಹಣ ಮಾಡುವರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ತಂಡವನ್ನು ಆಶೀರ್ವದಿಸುವಂತೆ ಉದ್ಯಮಿಗಳು, ವ್ಯಾಪಾರಸ್ಥರು, ಚೆಂಬರ್ ಸದಸ್ಯರು ಹಾಗೂ ಅಭಿಮಾನಿಗಳಲ್ಲಿ ನಿರ್ಗಮಿತ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಹಾಗೂ ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಅವರು ಮನವಿ ಮಾಡಿದ್ದಾರೆ.
Kshetra Samachara
05/08/2026 10:31 pm
LOADING...