ಬೆಳಗಾವಿ : ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಬುಧವಾರ ಸಂಜೆ ಬೆಂಬಲಿಗರು ಪಂಜಿನ ಮೆರವಣಿಗೆ ನಡೆಸಿದರು.
ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿ, ಲಕ್ಷ್ಮೀ ಹೆಬ್ಬಾಳಕರ್ ಪರ ಘೋಷಣೆಗಳನ್ನು ಕೂಗಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಕೆಲಕಾಲ ಗಮನ ಸೆಳೆಯಿತು.
ಬಳಿಕ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿದ್ದಪ್ಪ ಸಿಂಗಾಡಿ, ರಘು ಪಾಟೀಲ, ಮನ್ಸುರ್ ಅಲಿ ಅತ್ತಾರ, ಅನಿಲ್ ಕರಲಿಂಗಣ್ಣವರ, ಸಿದ್ದಪ್ಪಾ ಚಾಪಗಾಂವಿ, ಅಡಿವೆಪ್ಪಾ ತೋಟಗಿ, ರವಿ ಗಾಣಗಿ, ಮುಶ್ಯಾಪ ಉಪ್ಪಾರ, ರಾಜು ಉಪ್ಪಾರ, ನೀಲಕಂಠ, ಆಂಜನೇಯ, ಗೌಸ್ ಜಾಲಿಕೊಪ್ಪ, ರವಿ ಗಣಿಗಾ, ರಮೇಶ್ ವಾಲಿ, ರಶೀದ್ ಸಾಹೇದ್, ಬಸವರಾಜ್ ಇಟಗಿ, ಆನಂದ್ ಪಾಟೀಲ್, ಸುರೇಶ್ ಗೊಂಡ್ಲೂರು, ಚನ್ನಪ್ಪ ಹುದಲಿ, ನೀಲಕಂಠ ಪರವತಿ, ಬಸವರಾಜ್ ಯಾದವಾಡ, ಮಹೇಶ್ ಗುಂಡ್ಲೂರು ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
PublicNext
05/08/2026 10:42 pm
LOADING...