ಗದಗ: ಸೌದಿ ಅರೇಬಿಯಾದ ರಿಯಾದ್‌ನ ಪ್ರೈಮರಿ ಹೆಲ್ತ್ ಕೇರ್‌ನಲ್ಲಿ ಶುಶ್ರೂಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನಗರದ ನಿವಾಸಿ ಗ್ಲಾಡಿಸ್ ಹುಬ್ಬಳ್ಳಿ (39) ಈಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಜುಲೈ 14ರಂದು ಕೆಲಸ ಮುಗಿಸಿ, ರೂಂಗೆ ತೆರಳುತ್ತಿದ್ದ ವೇಳೆ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರಿಂದ ಗ್ಲಾಡಿಸ್ ಮೃತಪಟ್ಟಿದ್ದಾರೆ. ಅವರಿಗೆ ಪತಿ, ಮೂವರು ಮಕ್ಕಳಿದ್ದಾರೆ.
‘ಮೂರು ವರ್ಷಗಳಿಂದ ಗ್ಲಾಡಿಸ್ ಅವರು ರಿಯಾದ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಮೃತದೇಹವನ್ನು ಭಾರತಕ್ಕೆ ರವಾನಿಸುವ ಕುರಿತು ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಬೆಂಗಳೂರು ತಲುಪಿದ ನಂತರ ಗದಗಕ್ಕೆ ತರಲಾಗುತ್ತದೆ. ರಿಯಾದ್‌ನ ಭಾರತೀಯ ಸಂಘಟನೆಗಳು ತುಂಬಾ ಸಹಕಾರ ನೀಡಿವೆ’ ಎಂದು ಗ್ಲಾಡಿಸ್ ಅವರ ಪತಿ ಆನಂದಕುಮಾರ ಹುಬ್ಬಳ್ಳಿ ತಿಳಿಸಿದರು.
PublicNext
21/07/2026 08:14 pm
LOADING...