ಹಾನಗಲ್: ನಗರದ ಆರಾಧ್ಯ ಶಕ್ತಿ ದೇವತೆ ಶ್ರೀ ಗ್ರಾಮದೇವಿ (ದ್ಯಾಮವ್ವ) ಅವರ ಕಲ್ಲಿನ ನೂತನ ದೇವಸ್ಥಾನದ ಲೋಕಾರ್ಪಣೆ, ಶ್ರೀದೇವಿ ವಿಗ್ರಹದ ನೇತ್ರೋನ್ಮೀಲನ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಹೋತ್ಸವದ ಅಂಗವಾಗಿ ಮಹೋತ್ಸವದ ಪೋಸ್ಟರ್ ಅನ್ನು ದೇವಸ್ಥಾನದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದು, ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಿದರು.
ಆಗಸ್ಟ್ 18, 19 ಹಾಗೂ 20, 2026ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿವಿಧಾನಗಳು, ಶೋಭಾಯಾತ್ರೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ವೈಭವದಿಂದ ನಡೆಯಲಿವೆ ಎಂದು ತಿಳಿಸಿದರು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
PublicNext
22/07/2026 05:26 pm
LOADING...