ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೆಮರಿಯಿಂದ ರೈತ ಮಹಿಳೆಗೆ 3 ಲಕ್ಷ ನಷ್ಟ: ಪರಿಹಾರಕ್ಕೆ ಆಗ್ರಹ

ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ದಡದಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬರ ಜಮೀನಿನಲ್ಲಿ ಕಳೆದ 4 ದಿನಗಳಿಂದ ತಂಗಿದ್ದ ಆನೆ ಮರಿಯೊಂದು ಬೆಳೆಯನ್ನು ತಿಂದು ತುಳಿದು ಸುಮಾರು 3 ಲಕ್ಷ ರೂ. ನಷ್ಟ ಉಂಟು ಮಾಡಿದೆ.

ದಡದಹಳ್ಳಿ ಗ್ರಾಮದ ಒಂಟಿ ವಿಧವೆ ಮಹಿಳೆ ಸಣ್ಣಮ್ಮ, ಲೇ. ಚೆನ್ನಯ್ಯ ಎಂಬುವವರು ಬೇದ್ದಲಾಪುರ ಸರ್ವೆ ನಂಬರ್ 11/27 A ಯಲ್ಲಿ 3 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದರು. ಕಟಾವಿಗೆ ಬಂದಿದ್ದ ಬೆಳೆಯೊಳಗೆ ಆನೆ ಮರಿಯೊಂದು 4 ದಿನಗಳಿಂದ ತಂಗಿತ್ತು.

ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ 3 ಸಾಕಾನೆಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬೆಳಗ್ಗಿನಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿ ಮರಿಯಾನೆಯನ್ನು ಸೆರೆ ಹಿಡಿದರು. ಆದರೆ ಈ ಕಾರ್ಯಾಚರಣೆ ವೇಳೆಯೇ ರೈತ ಮಹಿಳೆಯ ಜಮೀನಿನಲ್ಲಿದ್ದ ಮುಸುಕಿನ ಜೋಳದ ಬೆಳೆಯನ್ನು ಆನೆ ತುಳಿದು ನಾಶಗೊಳಿಸಿದೆ.

ಇದರಿಂದ ರೈತ ಮಹಿಳೆಗೆ ಸುಮಾರು 3 ಲಕ್ಷ ರೂ. ನಷ್ಟವಾಗಿದೆ. ಕೂಡಲೇ ಸ್ಥಳದಲ್ಲೇ ಪರಿಹಾರ ನೀಡಬೇಕೆಂದು ಶಿವಲಿಂಗಯ್ಯ ಯಶವಂತಪುರ, ಮರಿಸ್ವಾಮಿ, ಗಣೇಶ್ ಅವರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Edited By :
PublicNext

PublicNext

22/07/2026 06:06 pm

Cinque Terre

12.52 K

Cinque Terre

0

ಸಂಬಂಧಿತ ಸುದ್ದಿ