ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕ್ಯಾಮೆರಾ ಸರ್ಪಗಾವಲು - ಹೆಜ್ಜೆ ಹೆಜ್ಜೆಗೂ ಹದ್ದಿನ ಕಣ್ಣು, ಭಕ್ತರ ಸುರಕ್ಷತೆ ಪ್ರಾಧಿಕಾರದ ಆದ್ಯತೆ...

ಮೈಸೂರು: ಆಷಾಢ ಮಾಸ ಹಿನ್ನಲೆ ನಾಡದೇವಿಯ ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಭಕ್ತರ ಸುರಕ್ಷತೆಗಾಗಿ ಚಾಮುಂಡಿ ಬೆಟ್ಟ ಪ್ರಾಧಿಕಾರ ಕ್ಯಾಮೆರಾ ಸರ್ಪಗಾವಲನ್ನ ಹಾಕಿದೆ.ಹೆಜ್ಜೆ ಹೆಜ್ಜೆಗೂ ಹದ್ದಿನ ಕಣ್ಣಿಡಲಾಗಿದೆ.ವ್ಯವಸ್ಥಿತವಾಗಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.ಆರ್ ಸಿ ಬಿ ಚಾಂಪಿಯನ್ಸ್ ಆದ ವೇಳೆ ಬೆಂಗಳೂರಿನಲ್ಲಿ ನಡೆದ ಅಹಿತಕರ ಘಟನೆ ಹಿನ್ನಲೆ ಪ್ರಾಧಿಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿದೆ.ಪೂರ್ವಿ ಎಲೈಟ್ ಟೆಕ್ನಾಲಜಿ ಪ್ರೈ ಲಿ ನ ಸಹಯೋಗದೊಂದಿಗೆ AI facial recognition system ಅಳವಡಿಸಲಾಗಿದೆ. ಈ ವ್ಯವಸ್ಥೆಯಡಿ ಮೆಟ್ಟಿಲು ಮಾರ್ಗದಿಂದ ಹಿಡಿದು ಚಾಮುಂಡಿ ಬೆಟ್ಟದ ದೇವಾಲಯದವರೆಗೂ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ.

ಒಟ್ಟು 161 ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ಭಕ್ತ,ಸಿಬ್ಬಂದಿ,ಪೊಲೀಸ್ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.ಎಷ್ಟು ಮಂದಿ ಭಕ್ತರು ಆಗಮಿಸಿದ್ದಾರೆ ಹಾಗೂ ನಿರ್ಗಮಿಸಿದ್ದಾರೆ ಎಲ್ಲ ಮಾಹಿತಿ ಕಲೆ ಹಾಕುತ್ತದೆ.ಪ್ರತಿ ಭಕ್ತರ ಫೋಟೋ ಕ್ಲಿಕ್ಕಿಸುತ್ತದೆ.ಎಷ್ಟು ಮಂದಿ ವಿಐಪಿ ಗಳು ಭೇಟಿ ನೀಡಿದ್ದಾರೆ ಹಾಗೂ ಇವರೊಂದಿಗೆ ಬಂದವರ ವಿಡಿಯೋ ಇಲ್ಲಿ ಸಂಗ್ರಹವಾಗುತ್ತದೆ.ಮೆಟ್ಟಿಲು ಮಾರ್ಗ,ಬಸ್ ನಿಲ್ದಾಣ, ಕಾಂಪ್ಲೆಕ್ಸ್,ಸಾಂಸ್ಕೃತಿಕ ವೇದಿಕೆ,ದೇವಾಲಯದ ಒಳ ಆವರಣ ಹಾಗೂ ಹೊರ ಆವರಣದಲ್ಲಿ ಹೈಟೆಕ್ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ.ನಾಡದೇವಿಯ ದರ್ಶನ ಪಡೆಯವ ಭಕ್ತನ ಪ್ರತಿಯೊಂದು ಚಲನವಲನವೂ ಇದರಲ್ಲಿ ಸೆರೆಯಾಗುತ್ತದೆ. ಒಬ್ಬ ಭಕ್ತ ದರುಶನ ಪಡೆಯಲು ಎಷ್ಟು ಅವಧಿ ತೆಗೆದುಕೊಳ್ಳುತ್ತದೆ ಎಂಬುದೂ ಸಹ ತಿಳಿಯಬಹುದಾಗಿದೆ.ಯಾವುದೇ ಭಕ್ತ ದೇವಿಯ ಫೋಟೋ ಕ್ಲಿಕ್ಕಿಸಿದರೆ ಕೂಡಲೇ ಮಾಹಿತಿ ರವಾನಿಸುತ್ತದೆ.ಹೀಗೆ ಹತ್ತು ಹಲವು ವಿಶೇಷತೆಗಳುಳ್ಳ AI facial recognition system ಭಕ್ತರ ಸುರಕ್ಷತೆಗಾಗಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ.ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಇಲ್ಲಿ ಅವಕಾಶವೇ ಇಲ್ಲದಂತೆ ಪ್ರಾಧಿಕಾರ ಎಚ್ಚರಿಕೆ ವಹಿಸಿದೆ...

Edited By : Somashekar
PublicNext

PublicNext

05/08/2026 03:03 pm

Cinque Terre

4.02 K

Cinque Terre

0

ಸಂಬಂಧಿತ ಸುದ್ದಿ