ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 3 ವರ್ಷದ ಮಗುವಿನ ದಾರುಣ ಸಾವು

ಮೈಸೂರು: ಆಟಿಕೆಯಂತೆ ಕಂಡ ಪ್ಲಾಸ್ಟಿಕ್ ಬಾಲ್ ಒಂದು ಬಾಲ್ಯವನ್ನೇ ಬಲಿ ತೆಗೆದುಕೊಂಡಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ಶನಿವಾರ ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ಗಂಟಲಿಗೆ ಸಿಲುಕಿ 3 ವರ್ಷದ ಮಗು ಮೃತಪಟ್ಟ ಘಟನೆ ನಡೆದಿದ್ದು, ಇಡೀ ಗ್ರಾಮ ದುಃಖದಲ್ಲಿ ಮುಳುಗಿದೆ.

ಗೌರಿಪುರ ಗ್ರಾಮದ ಸಂತೋಷ್ - ಐಶ್ವರ್ಯ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ (3) ಮಗು ಅಳುತ್ತಿದ್ದನ್ನು ನೋಡಿದ ಸಂಬಂಧಿಕರ ಮಕ್ಕಳು, ಸಮಾಧಾನಪಡಿಸಲು ಗೌರಿಪುರದ ಅಂಗಡಿಯಿಂದ ಕುರ್‌ಕುರೆ ಪ್ಯಾಕೆಟ್ ತಂದು ಕೊಟ್ಟಿದ್ದಾರೆ.

ಮಕ್ಕಳನ್ನು ಆಕರ್ಷಿಸಲು ಕಂಪನಿಗಳು ಪ್ಯಾಕೆಟ್‌ನಲ್ಲಿ ಇಡುವ ಚಿಕ್ಕ ಪ್ಲಾಸ್ಟಿಕ್ ಬಾಲ್ ಅನ್ನು ಮಗು ಕುರ್‌ಕುರೆಯೊಂದಿಗೆ ಆಕಸ್ಮಿಕವಾಗಿ ನುಂಗಿದೆ. ಕ್ಷಣಾರ್ಧದಲ್ಲಿ ಬಾಲ್ ಗಂಟಲಿಗೆ ಸಿಲುಕಿ ಮಗು ಒದ್ದಾಡಲು ಶುರುಮಾಡಿದೆ.

ಮಗು ಉಸಿರಾಡಲು ಪರದಾಡುವುದನ್ನು ನೋಡಿದ ಆತಂಕಗೊಂಡ ಪೋಷಕರು ಕೂಡಲೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯದಲ್ಲೇ ಉಸಿರುಗಟ್ಟಿ ಮುಕುಂದ್ ಮಯೂರ್ ಕೊನೆಯುಸಿರೆಳೆದ.

ಒಂದೇ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮತ್ತು ಗ್ರಾಮಸ್ಥರ ಕಣ್ಣೀರು ಎಲ್ಲರ ಮನ ಕಲಕಿದೆ.

Edited By :
PublicNext

PublicNext

02/08/2026 05:19 pm

Cinque Terre

15 K

Cinque Terre

1

ಸಂಬಂಧಿತ ಸುದ್ದಿ