ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀರಾಮನ ಹುಂಡಿ ಕಳ್ಳತನ ಪ್ರಕರಣ ಖಂಡಿಸಿ ಪ್ರೊಟೆಸ್ಟ್

ಅಯೋಧ್ಯೆ ಶ್ರೀರಾಮ ಮಂದಿರ ಹುಂಡಿ ಕಳ್ಳತನ ಪ್ರಕರಣ ಖಂಡಿಸಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪಂಜಿನ ಮೆರವಣಿಗೆ ನಡೆಯಿತು. ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪಂಜಿನ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೈಯಲ್ಲಿ ಪಂಜು ಹಿಡಿದು ವೃತ್ತದಲ್ಲಿ 5 ರಿಂದ 10 ನಿಮಿಷಗಳ ಕಾಲ ಒಂದು ಸುತ್ತು ಹಾಕಿ ಮೆರವಣಿಗೆ ನಡೆಸಿದ್ರು. ಪಂಜಿನ ಮೆರವಣಿಗೆ ಪ್ರತಿಭಟನೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಜನ ಮಾತ್ರ ಭಾಗವಹಿಸಿದ್ದು ಕಂಡುಬಂತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಜಯ್ ಕುಮಾರ್ ಸರ್ ನಾಯಕ್, ಕಾಂಗ್ರೆಸ್ ಮುಖಂಡ ನಾಗರಾಜ್ ಹಡ್ಲಿ ಭಾಷಣ ಮಾಡಿ, ಹುಂಡಿ ಕಳ್ಳತನ ಪ್ರಕರಣದಿಂದ ಶ್ರೀರಾಮನ ಭಕ್ತರ ಭಾವನೆಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By :
PublicNext

PublicNext

23/07/2026 08:20 am

Cinque Terre

9.82 K

Cinque Terre

0

ಸಂಬಂಧಿತ ಸುದ್ದಿ