ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೀರ್ಷಿಕೆ: ನಾಳೆ ಬೆಂಗಳೂರಿನಲ್ಲಿ ಪವರ್ ಕಟ್

ಬೆಂಗಳೂರು: ನಾಳೆ ಯಲಹಂಕ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್‌ನ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ, 66/11 ಕೆವಿ ಯಲಹಂಕ ಸಬ್‌ಸ್ಟೇಷನ್ ವ್ಯಾಪ್ತಿಯ ಹೆಬ್ಬಾಳ ವಿಭಾಗದ ಸಿ-7 ಉಪವಿಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಯಲಹಂಕ ನ್ಯೂ ಟೌನ್, ಅಲ್ಲಾಳಸಂದ್ರ, ಕೋಗಿಲು ಸೇರಿದಂತೆ ಹಲವು ಪ್ರದೇಶಗಳಿಗೆ ವಿದ್ಯುತ್ ಕಡಿತ ತಟ್ಟಲಿದೆ. ಬಾಗಲೂರು ಕ್ರಾಸ್, ಕಟ್ಟಿಗೆನಹಳ್ಳಿ, ಪಾಲನಹಳ್ಳಿ ಭಾಗಗಳಿಗೂ ವಿದ್ಯುತ್ ವ್ಯತ್ಯಯವಾಗಲಿದೆ. ಆರ್‌ಎಂಜಡ್ ಗ್ಯಾಲೇರಿಯಾ, ಪೂರ್ವಾಂಕರ ಸುತ್ತಮುತ್ತಲೂ ವಿದ್ಯುತ್ ಕಡಿತವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ (BESCOM) ಮನವಿ ಮಾಡಿದೆ.

Edited By :
Kshetra Samachara

Kshetra Samachara

23/07/2026 01:03 pm

Cinque Terre

456

Cinque Terre

0

ಸಂಬಂಧಿತ ಸುದ್ದಿ