ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಬ್ಯಾನರ್ ವಿವಾದ ಕೊಲೆ - 17 ಜನರಿಗೆ ಜೀವಾವಧಿ ಶಿಕ್ಷೆ

ಯಾದಗಿರಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯವು 2014ರ ಕನಕನಕೋಳೂರು ಕೊಲೆ ಪ್ರಕರಣದಲ್ಲಿ 17 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಸರಕಾರಿ ಅಭಿಯೋಜಕರ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಪ್ರಕರಣವು ಶಹಾಪೂರ ತಾಲೂಕಿನ ಕನಕನಕೋಳೂರು ಗ್ರಾಮದಲ್ಲಿ 15-16 ಜನವರಿ 2014 ರಂದು ಶ್ರೀ ಚೌಡೇಶ್ವರಿ ದೇವಿ ಜಾತ್ರೆಯ ಸಂದರ್ಭದಲ್ಲಿ ನಡೆದಿದೆ. ದಲಿತ ಮತ್ತು ಸವರ್ಣಿಯರ ಮುಖಂಡರ ಭಾವಚಿತ್ರದ ಕಟೌಟ್-ಬ್ಯಾನರ್‌ಗಳನ್ನು ಹರಿದ ವಿಷಯದಲ್ಲಿ ತಕರಾರು ಉಂಟಾಗಿತ್ತು.

17-01-2014 ರಂದು ಮೃತ ದೇವೇಂದ್ರಪ್ಪ ಭೀಮಪ್ಪ ದಳಪತಿಯವರು ವಿಚಾರಣೆಗೆ ಹೋದಾಗ, ಆರೋಪಿತರು ಜಾತಿ ನಿಂದನೆ ಮಾಡಿ, ಕೊಡಲಿ, ಕಲ್ಲು ಮತ್ತು ಬಡಿಗೆಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿದೆ.

12 ವರ್ಷಗಳ ವಿಚಾರಣೆಯ ಬಳಿಕ ನ್ಯಾಯಾಧೀಶರಾದ ಶ್ರೀ ಮರುಳಾಸಿದ್ದರಾಧ್ಯ ಹೆಚ್.ಜೆ. ಅವರು 32 ಆರೋಪಿಗಳಲ್ಲಿ 20 ಜನರನ್ನು ದೋಷಿಗಳೆಂದು ಪರಿಗಣಿಸಿದ್ದಾರೆ. ಆರೋಪಿ 1 ರಿಂದ 17 ರವರೆಗೆ ಜೀವಾವಧಿ, 18ನೇ ಆರೋಪಿಗೆ 7 ವರ್ಷ, 19 ಮತ್ತು 20ನೇ ಆರೋಪಿಗಳಿಗೆ 6 ತಿಂಗಳು ಶಿಕ್ಷೆ ವಿಧಿಸಲಾಗಿದೆ. ಒಟ್ಟು 4 ಲಕ್ಷ 25 ಸಾವಿರ ರೂಪಾಯಿ ದಂಡ ವಿಧಿಸಿ, ಆ ಹಣವನ್ನು ಮೃತರ ಸಂಬಂಧಿಕರಿಗೆ ನೀಡುವಂತೆ ಆದೇಶಿಸಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು 68 ಸಾಕ್ಷಿದಾರರಲ್ಲಿ 37 ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸರ್ಕಾರದ ಪರವಾಗಿ ಪ್ರಧಾನ ಸರಕಾರಿ ಅಭಿಯೋಜಕರಾದ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದರು.

Edited By : Nagaraj Tulugeri
PublicNext

PublicNext

24/07/2026 03:21 pm

Cinque Terre

5.98 K

Cinque Terre

0

ಸಂಬಂಧಿತ ಸುದ್ದಿ