ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಘೋರ ರಸ್ತೆ ಅಪಘಾತ: ಭಾರತಕ್ಕೆ ಬರಬೇಕಿದ್ದ ಹೈದರಾಬಾದ್ ಮೂಲದ ಟೆಕಿ ಸ್ಥಳದಲ್ಲೇ ದಾರುಣ ಸಾವು

ಹೈದರಾಬಾದ್/ನ್ಯೂಜೆರ್ಸಿ: ಭಾರತಕ್ಕೆ ಮರಳಲು ಕೇವಲ ಎರಡು ದಿನಗಳು ಬಾಕಿ ಇರುವಾಗ, ಅಮೆರಿಕದ ನ್ಯೂಜೆರ್ಸಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀಪಾತಿ ದೀಪಾ (42) ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತ ದೀಪಾ ಮೂಲತಃ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಆಮನಗಲ್ಲು ಮಂಡಲದ ಆಕುತೋಟಪಲ್ಲಿ ಗ್ರಾಮದವರಾಗಿದ್ದು, ಪ್ರಸ್ತುತ ಕುಟುಂಬವು ಹೈದರಾಬಾದ್‌ನ ಹಸ್ತಿನಾಪುರದ ಟೀಚರ್ಸ್ ಕಾಲೋನಿಯಲ್ಲಿ ವಾಸಿಸುತ್ತಿದೆ.

ಇನ್ನೂ ದೀಪಾ ಅವರು ತಮ್ಮ ಪತಿ ರಾಮಕೃಷ್ಣ ರೆಡ್ಡಿ ಅವರನ್ನು ಸಬ್‌ವೇ/ಮೆಟ್ರೋ ಸ್ಟೇಷನ್‌ಗೆ ತಲುಪಿಸಿ ವಾಪಸ್ ಬರುವಾಗ, ಎದುರಿನಿಂದ ಬಂದ ಮತ್ತೊಂದು ಕಾರು ಇವರ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ದೀಪಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ಕಾರಣವಾದ ಮತ್ತೊಂದು ಕಾರಿನ ಚಾಲಕನನ್ನು ನ್ಯೂಜೆರ್ಸಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಇನ್ನೊಂದು ನೋವಿನ ವಿಚಾರ ಎಂದರೆ ದೀಪಾ ಹಾಗೂ ಅವರ ಪತಿ ರಾಮಕೃಷ್ಣ ರೆಡ್ಡಿ 2008ರಲ್ಲಿ ಅಮೆರಿಕಕ್ಕೆ ತೆರಳಿ, ನ್ಯೂಜೆರ್ಸಿಯಲ್ಲಿ ಸಾಫ್ಟ್‌ವೇರ್ ವೃತ್ತಿಯಲ್ಲಿದ್ದುಕೊಂಡು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದರು. ಕುಟುಂಬಸ್ಥರನ್ನು ಭೇಟಿಯಾಗಲು ದೀಪಾ ಅವರು ಇನ್ನೆರಡು ದಿನಗಳಲ್ಲಿ ಭಾರತಕ್ಕೆ ಬರಬೇಕಿತ್ತು. ಆದರೆ, ಪ್ರಯಾಣದ ಮುನ್ನವೇ ಈ ದುರಂತ ಸಂಭವಿಸಿರುವುದು ಇಡೀ ಕುಟುಂಬವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ.

ಈ ದುಃಖದ ನಡುವೆಯೂ ಸಾರ್ಥಕತೆ ಮೆರೆದಿರುವ ಕುಟುಂಬಸ್ಥರು ದೀಪಾ ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಶೀಘ್ರವಾಗಿ ಭಾರತಕ್ಕೆ ತರಲು ಅಗತ್ಯ ನೆರವು ನೀಡಬೇಕೆಂದು ದೀಪಾ ಅವರ ಕುಟುಂಬಸ್ಥರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

29/07/2026 12:31 pm

Cinque Terre

66.5 K

Cinque Terre

0

ಸಂಬಂಧಿತ ಸುದ್ದಿ