ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಹಿಂದೂ ಸ್ಮಶಾನದ ಪಕ್ಕದಲ್ಲಿರುವ ಗಂಗಾಧರ ಸಿಎನ್‌ಜಿ ಪೆಟ್ರೋಲ್ ಪಂಪ್‌ನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಭಾರತೀಯ ದ್ರಾವಿಡ ದಲಿತ ಸಂಘಟನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಧರಣಿ ವೇಳೆ ಸಂಘಟನೆಯ ಮುಖಂಡ ಸೋಮು ಹಟ್ಟಿ ಮಾತನಾಡಿ, ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಪೆಟ್ರೋಲ್ ಪಂಪ್‌ನಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಸಿಎನ್‌ಜಿ ಸೌಲಭ್ಯವನ್ನೂ ಆರಂಭಿಸಲಾಗಿದೆ. ಪಂಪ್‌ಗೆ ಹೊಂದಿಕೊಂಡಂತೆಯೇ ಹಿಂದೂ ಸ್ಮಶಾನವಿದ್ದು, ಅಂತ್ಯಸಂಸ್ಕಾರದ ವೇಳೆ ಬೆಂಕಿಯ ಕಿಡಿಗಳು ಗಾಳಿಯೊಂದಿಗೆ ಹರಡಿ ಸಿಎನ್‌ಜಿ ಘಟಕಕ್ಕೆ ತಗುಲಿದರೆ ಭಾರಿ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನೂ ಇದೇ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಸಂತೋಷ ಠಕ್ಕೆ ಮಾತನಾಡಿ, ಸಿಎನ್‌ಜಿ ಪಂಪ್ ಪಕ್ಕದಲ್ಲೇ ಹಿಂದೂ ಸ್ಮಶಾನ, ಬಾರ್‌ಗಳು ಹಾಗೂ ವಿದ್ಯಾರ್ಥಿ ನಿಲಯವಿದ್ದು, ಪ್ರತಿನಿತ್ಯ ಸಾವಿರಾರು ಜನರು ಓಡಾಡುವ ಪ್ರದೇಶದಲ್ಲಿ ಇಂತಹ ಪಂಪ್ ಕಾರ್ಯನಿರ್ವಹಿಸುವುದು ಸುರಕ್ಷತಾ ದೃಷ್ಟಿಯಿಂದ ಸೂಕ್ತವಲ್ಲ. ಕೂಡಲೇ
ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಿದ್ದರೆ ಸಿಎನ್‌ಜಿ ಪಂಪ್‌ನ್ನು ಸ್ಥಳಾಂತರಿಸಬೇಕು. ಇಲ್ಲವಾದರೆ ಹೋರಾಟವನ್ನು ಉಗ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ತಾಲೂಕು ಅಧ್ಯಕ್ಷ ಸಿದ್ದು ಹುಳೆ, ಖಾಜು ಹರಿಜನ, ರಮೇಶ ಚಲವಾದಿ,
ಅನಿತಾ ದಡೇಕರ್, ಸಾಯಿ ರಾಮಚಂದ್ರ, ಸಂದೀಪ ಪತ್ತಾರ, ಸಂಗಣ್ಣ ಹಚ್ಯಾಳ, ಸೋಮು ರಣದೇವಿ ಸೇರಿದಂತೆ ಇತರರು ಇದ್ದರು.
ಪಬ್ಲಿಕ್ ನೆಕ್ಸ್ಟ್, ವಿಜಯಪುರ
PublicNext
29/07/2026 09:17 pm
LOADING...