ಚಿತ್ರದುರ್ಗ: KSRTC EPS-95 ಪಿಂಚಣಿದಾರರಿಗೆ ಕನಿಷ್ಠ 7,000 ರೂ. ಪಿಂಚಣಿ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿಯ ಚಿತ್ರದುರ್ಗ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿದ ನಿವೃತ್ತ ನೌಕರರು, "ಪ್ರಸ್ತುತ EPS-95 ಪಿಂಚಣಿದಾರರಿಗೆ ಕೇವಲ 1,000 ರಿಂದ 3,000 ರೂ. ಪಿಂಚಣಿ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮಗೆ ಕನಿಷ್ಠ 7,000 ರೂ. ಪಿಂಚಣಿ ನಿಗದಿಪಡಿಸಬೇಕು. ಇದರ ಜೊತೆಗೆ ಉಚಿತ ವೈದ್ಯಕೀಯ/ಆರೋಗ್ಯ ಸೌಲಭ್ಯ ಒದಗಿಸಬೇಕು ಹಾಗೂ ಪಿಂಚಣಿ ವಂಚಿತರಿಗೆ ಕನಿಷ್ಠ 5,000 ರೂ. ಧನಸಹಾಯ ನೀಡಬೇಕು" ಎಂದು ಆಗ್ರಹಿಸಿ ಸಂಸದ ಗೋವಿಂದ ಕಾರಜೋಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.
PublicNext
30/07/2026 01:15 pm
LOADING...