ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಕನಹಟ್ಟಿ : ಹೈನುಗಾರಿಕೆ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಒತ್ತು - ಕೃಷಿ ವಿಸ್ತರಣಾ ತರಬೇತಿ ಕಾರ್ಯಕ್ರಮ

ನಾಯಕನಹಟ್ಟಿ : ಕೃಷಿ ವಿಸ್ತರಣಾ ತರಬೇತಿ ಕಾರ್ಯಕ್ರಮದ ಅಂಗವಾಗಿ ಜಗಳೂರು ಜಿಲ್ಲಾ ವ್ಯಾಪ್ತಿಯ ನಾಯಕನಹಟ್ಟಿ ಯೋಜನಾ ಕಚೇರಿಯಿಂದ ಒಬಣ್ಣನಹಳ್ಳಿ ಗ್ರಾಮದಲ್ಲಿ ಹೈನುಗಾರಿಕೆ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ಚನ್ನವೀರಪ್ಪ ಅವರು ಹೈನುಗಾರಿಕೆಯ ಮಹತ್ವ, ವೈಜ್ಞಾನಿಕ ಪಶುಸಂಗೋಪನೆ, ಉತ್ತಮ ತಳಿಯ ಜಾನುವಾರುಗಳ ಸಾಕಣೆ, ಸಮರ್ಪಕ ಆಹಾರ ನಿರ್ವಹಣೆ ಹಾಗೂ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.

ವಲಯ ಮೇಲ್ವಿಚಾರಕಿ ಶ್ರೀಮತಿ ಶಶಿರೇಖಾ ಅವರು ಸರ್ಕಾರದ ವಿವಿಧ ಕೃಷಿ ಹಾಗೂ ಪಶುಸಂಗೋಪನೆ ಯೋಜನೆಗಳ ಕುರಿತು ವಿವರಿಸಿ, ರೈತರು ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿಗಳು, ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿ ಹೈನುಗಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡರು.

Edited By :
PublicNext

PublicNext

30/07/2026 07:11 pm

Cinque Terre

5.35 K

Cinque Terre

0

ಸಂಬಂಧಿತ ಸುದ್ದಿ