ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 31-7-2026

ಮೇಷ: ಯಾವುದೇ ಪರಿಸ್ಥಿತಿಯನ್ನು ಸಮರ್ಥ ವಾಗಿ ನಿಭಾಯಿಸುವಿರಿ. ಉದ್ಯೋಗದ ಕಾರಣ ದಿಂದ ಕೀರ್ತಿ. ಹೊಟೇಲ್‌ ಉದ್ಯಮಿಗಳಿಗೆ ಬಹಳಷ್ಟು ನೆಮ್ಮದಿ. ಮಕ್ಕಳ ಉದ್ಯಮ ಯಶಸ್ಸಿನ ಹಾದಿಯಲ್ಲಿ.

ವೃಷಭ: ಹೆಸರಿಗೆ ತಕ್ಕಂತೆ ಮುನುಗ್ಗುವ ಪ್ರವೃತ್ತಿ. ಹೊಸ ಅವಕಾಶಗಳ ಸದುಪ ಯೋಗ. ಖಾದಿಯ ಸಿದ್ಧ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ.

ಮಿಥುನ: ಚಾಂಚಲ್ಯಕ್ಕೆ ವಿದಾಯದಿಂದ ಕ್ಷೇಮ. ಖಾಸಗಿ ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ಕರ್ತವ್ಯಲೋಪ ಆಗದಂತೆ ಎಚ್ಚರ. ಯುವಜನರಿಗೆ ಧಾರ್ಮಿಕ ಮಾರ್ಗದರ್ಶನ.

ಕರ್ಕಾಟಕ: ಎಂದೂ ಎಣಿಸದ ರೀತಿಯಲ್ಲಿ ಕಾರ್ಯಸಾಧನೆ. ಉದ್ಯೋಗಸ್ಥರಿಗೆ ವೇತನ ಪರಿಷ್ಕರಣೆ. ಉದ್ಯಮಗಳು ಪ್ರಗತಿಯತ್ತ ದಾಪುಗಾಲು.

ಸಿಂಹ: ಹೆಸರಿಗೆ ತಕ್ಕ ಧೈರ್ಯದಿಂದ ಮುನ್ನುಗ್ಗಿ. ಒಂದಕ್ಕಿಂತ ಹೆಚ್ಚು ವ್ಯವಹಾರ ಗಳತ್ತ ಗಮನ ಅನಿವಾರ್ಯ. ಉದ್ಯೋಗಸ್ಥರಿಗೆ ಹೆಚ್ಚು ದುಡಿಯಲು ಉತ್ತೇಜನ.

ಕನ್ಯಾ: ಸೂಕ್ಷ್ಮ ಕೆಲಸಗಳಲ್ಲಿ ಪರಿಣತಿ ಸಾಧನೆ. ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ. ಪ್ರತಿಭೆ ಹಾಗೂ ಕಾರ್ಯನಿಷ್ಠೆಗೆ ಶ್ಲಾಘನೆ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆ ಸಿಗುವ ಭರವಸೆ.

ತುಲಾ: ಉದ್ಯೋಗಸ್ಥರಿಗೆ ಪ್ರತಿಭೆ ತೋರಿಸಲು ಅವಕಾಶ. ಉದ್ಯಮಿಗಳಿಗೆ ಪೈಪೋಟಿಯಲ್ಲಿ ಮೇಲುಗೈ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸಕಾಲಿಕ ಮಾರ್ಗದರ್ಶನ.

ವೃಶ್ಚಿಕ: ಎಲ್ಲ ಬಗೆಯ ಪರಿಸ್ಥಿತಿಗಳಲ್ಲೂ ಅನುಕೂಲ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳ ಆತಂಕ ಕೊಂಚ ದೂರ. ರಾಜಕಾರಣಿಗಳಿಗೆ ಬಿಗಿಯಾದ ಇಕ್ಕಟ್ಟಿನ ಪರಿಸ್ಥಿತಿ.

ಧನು: ದಿಗ್ಭ್ರಮೆಗೊಳಿಸುವ ಕಾರ್ಯ ಸಾಮರ್ಥ್ಯ ಪ್ರದರ್ಶನ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ.

ಮಕರ: ಸಂದಿಗ್ಧ ಪರಿಸ್ಥಿತಿಗಳಿಂದ ಸದ್ಯಕ್ಕೆ ಮುಕ್ತಿ. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ವಿಜಯ. ಗೆಳೆಯರ ಮನೆಯ ಕಾರ್ಯಕ್ರಮದಲ್ಲಿ ಭಾಗಿ. ಗೃಹೋಪಯೋಗಿ ಸಾಮಗ್ರಿಗಳ ದುರಸ್ತಿಗೆ ಧನವ್ಯಯ.

ಕುಂಭ: ಉದ್ಯೋಗಸ್ಥರಿಗೆ ನಿಶ್ಚಿಂತೆಯ ದಿನ. ಸರಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಿಂದ ಲಾಭ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸದ ಸಮಾಚಾರ.

ಮೀನ: ಉದ್ಯೋಗ ಸ್ಥಾನದಲ್ಲಿ ಸಹಚರರಿಂದ ವಿಶೇಷ ಸಹಾಯ. ಹೊಸ ಬಗೆಯ ವ್ಯವಹಾರಕ್ಕೆ ಚಿಂತನೆ. ಹಿರಿಯರ ವೃತ್ತಿ ಪುನರಾರಂಭ ಸಂಭವ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರ ಆರೋಗ್ಯದತ್ತ ಗಮನವಿರಲಿ.

Edited By : Vijay Kumar
PublicNext

PublicNext

31/07/2026 07:36 am

Cinque Terre

7.49 K

Cinque Terre

0