ಮೇಷ: ಅಡಿಕೆ ಮಾರಾಟಗಾರರಿಗೆ ಹಣ ಗಳಿಕೆ. ಸಾಗಾಣಿಕೆ ವ್ಯವಹಾರದಲ್ಲಿ ಮಂದಗತಿ. ಕೋಪಕ್ಕೆ ಒಳಗಾಗಬೇಡಿ. ಸಹನೆ ಇರಲಿ.
ವೃಷಭ: ನ್ಯಾಯಾಲಯದ ವಿಷಯಗಳಲ್ಲಿ ಗೆಲುವು ನಿಮ್ಮಕಡೆಗಿರುವುದು. ವೈದ್ಯರಿಗೆ ವಿದೇಶ ಪ್ರವಾಸ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಲಾಭ.
ಮಿಥುನ: ಶಿಕ್ಷಕ ವೃತ್ತಿಯವರಿಗೆ ಶುಭದಾಯಕ ದಿನ. ಕಮಿಷನ್ ವ್ಯಾಪಾರದಲ್ಲಿ ಲಾಭ ಬರುವುದು. ವಾಹನ ದುರಸ್ತಿಗೆ ಹಣ ಖರ್ಚು.
ಕಟಕ: ಮಾನಸಿಕ ಉತ್ಸಾಹ ವೃದ್ಧಿಯಾಗಲಿದೆ. ಮಿತ್ರರಿಂದ ಆರ್ಥಿಕ ಸಹಾಯ ದೊರೆಯುವುದು. ಕೃಷಿ ಉತ್ಪನ್ನಗಳಿಂದ ವಿಶೇಷ ಲಾಭ.
ಸಿಂಹ: ಹಣಕಾಸಿನ ವ್ಯವಹಾರದಲ್ಲಿ ನಷ್ಟವಾಗದು. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ. ಚಂಚಲ ಮನಸ್ಸು ಸಮಸ್ಯೆಗೆ ಕಾರಣವಾಗಲಿದೆ.
ಕನ್ಯಾ: ಹೋಟೆಲ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಿರಿ. ಗಣ್ಯ ವ್ಯಕ್ತಿಗಳ ಸಹಾಯ ಸಿಗಲಿದೆ. ಸಣ್ಣಪುಟ್ಟ ವ್ಯಾಪಾರದಲ್ಲಿ ಲಾಭ.
ತುಲಾ: ಸ್ತ್ರೀಯರಿಗೆ ಕೇಂದ್ರ ಸರ್ಕಾರದ ಉದ್ಯೋಗ ಪ್ರಾಪ್ತಿ. ಉನ್ನತ ಹುದ್ದೆಗೆ ಏರುವಿರಿ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಅನುಕೂಲ.
ವೃಶ್ಚಿಕ: ಕಾರ್ವಿುಕ ವರ್ಗದವರಿಗೆ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಯಂತ್ರೋಪಕರಣಗಳಿಂದ ತೊಂದರೆ. ಕುಟುಂಬದಲ್ಲಿ ಆಂತರಿಕ ಕಲಹ.
ಧನಸ್ಸು: ಹೈನುಗಾರಿಕೆಯಲ್ಲಿ ನಿರೀಕ್ಷಿತ ಲಾಭ ಕೈಸೇರಲಿದೆ. ನೀರು ಸರಬರಾಜು ಕಾರ್ಯದಲ್ಲಿ ಆದಾಯ. ಲೇಖಕರಿಗೆ ಸನ್ಮಾನ ಲಭಿಸುತ್ತದೆ.
ಮಕರ: ಸಂಗಾತಿಯೊಂದಿಗೆ ಇದ್ದ ಅಸಮಾಧಾನ ಬಗೆಹರಿಯಲಿದೆ. ವಕೀಲ ವೃತ್ತಿಯಲ್ಲಿ ಯಶ. ಇಲಾಖಾ ಪರೀಕ್ಷೆಯಲ್ಲಿ ಭಡ್ತಿ ಸಿಗುವುದು.
ಕುಂಭ: ಧಾರ್ವಿುಕ ಕಾರ್ಯ ಕೈಗೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ರಫ್ತು ವಸ್ತು ಮಾರಾಟದಲ್ಲಿ ವಿಶೇಷ ದಿನ.
ಮೀನ: ಭೂವಿವಾದ, ಎಲೆಕ್ಟ್ರಾನಿಕ್ಸ್ ವ್ಯಾಪಾರದಲ್ಲಿ ಪ್ರಗತಿ. ನೂತನ ವಸ್ತು ಖರೀದಿಗೆ ಖರ್ಚು. ಬಾಡಿಗೆ ವಾಹನ ಮಾಲೀಕರಿಗೆ ಲಾಭ.
PublicNext
05/08/2026 07:30 am
LOADING...