ಬೆಳಗಾವಿ: ರಾಷ್ಟ್ರ ನಿರ್ಮಾಣದಲ್ಲಿ ತಾಂತ್ರಿಕ ಮಹಾವಿದ್ಯಾಲಯಗಳ ಪಾತ್ರ ಬಹಳ ಮುಖ್ಯ. ತಾಂತ್ರಿಕ ಶಿಕ್ಷಣದಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ತಾಂತ್ರಿಕ ಮಹಾವಿದ್ಯಾಲಯಗಳ ಆಯ್ಕೆಯು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ತಾಂತ್ರಿಕ ಶಿಕ್ಷಣದಲ್ಲಿ ನಂಬಿಕೆಗೆ ಇನ್ನೊಂದು ಹೆಸರೇ ಬೆಳಗಾವಿಯ ಶಿವಬಸವ ನಗರದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ. ಸದ್ಯ ಈ ಮಹಾವಿದ್ಯಾಲಯದಲ್ಲಿ 2026-2027 ನೇ ಸಾಲಿನ ಪ್ರವೇಶಗಳು ಆರಂಭವಾಗಿವೆ.
ಹೌದು, ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯವು ರಾಜ್ಯದಲ್ಲೇ ವಿಶಿಷ್ಟವಾದ ತಾಂತ್ರಿಕ ಮಹಾವಿದ್ಯಾಲಯವಾಗಿದೆ. ಇಂಜಿನಿಯರಿಂಗ್ ಪದವಿಯ 9 ವಿಭಾಗಗಳು ಹಾಗೂ ಸ್ನಾತಕೋತ್ತರದ 2 ವಿಭಾಗಗಳನ್ನು ಹೊಂದಿರುವ ಈ ಸಂಸ್ಥೆಯು ಉತ್ತರ ಕರ್ನಾಟಕದಲ್ಲೇ ಪ್ರತಿಷ್ಠಿತ ಮಹಾವಿದ್ಯಾಲಯವಾಗಿ ಗುರುತಿಸಿಕೊಂಡಿದೆ. 'ಎರಡನೇ ವಿಶ್ವೇಶ್ವರಯ್ಯ' ಎಂದೇ ಹೆಸರುವಾಸಿಯಾದ ಉತ್ತರ ಕರ್ನಾಟಕ ಭಾಗದ ಶ್ರೇಷ್ಠ ನೀರಾವರಿ ತಜ್ಞ ಎಸ್.ಜಿ. ಬಾಳೆಕುಂದ್ರಿ ಅವರ ಹೆಸರನ್ನು ಈ ಮಹಾವಿದ್ಯಾಲಯಕ್ಕೆ ಇಡಲಾಗಿದೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮೂಲಕವೇ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ.
ಬೆಳಗಾವಿಯ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿರುವ ಈ ಕಾಲೇಜು, ವಿದ್ಯಾರ್ಥಿಗಳ ಏಕಾಗ್ರತೆ, ತಾಂತ್ರಿಕ ಕೌಶಲ್ಯ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ. ಇಲ್ಲಿ ಅನುಭವ ಸಂಪನ್ನ ಹಾಗೂ ವಿಷಯ ಪರಿಣತಿ ಹೊಂದಿದ ಉಪನ್ಯಾಸಕರ ತಂಡದಿಂದ ಸುಲಭ ಮತ್ತು ಸ್ಪಷ್ಟ ಬೋಧನೆ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಅವರ ಅಗತ್ಯಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುವುದು ಮಹಾವಿದ್ಯಾಲಯದ ವಿಶೇಷತೆಯಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಂಸ್ಥೆಗಳಿದ್ದರೂ, ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಮಾನ ಮಹತ್ವ ನೀಡಿ, ಮಮತೆಯಿಂದ ಶಿಕ್ಷಣ ನೀಡುವ ಸಂಸ್ಥೆಗಳು ವಿರಳ. ಅಂತಹ ಉತ್ತಮ ಸಂಸ್ಥೆಗಳ ಪೈಕಿ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ತನ್ನ ವಿಶಿಷ್ಟವಾದ ಕಾರ್ಯಶೈಲಿಯಿಂದ ಹೆಸರಾಗುತ್ತಿದೆ.
ಮಹಾವಿದ್ಯಾಲಯದ ಆವರಣದಲ್ಲಿ ಸುಸಜ್ಜಿತ ಗ್ರಂಥಾಲಯ, ಆಧುನಿಕ ಪ್ರಯೋಗಾಲಯಗಳು ಹಾಗೂ ಅಗತ್ಯವಾದ ಎಲ್ಲಾ ಶೈಕ್ಷಣಿಕ ಸೌಲಭ್ಯಗಳು ಇಲ್ಲಿವೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ, ಶುಚಿ-ರುಚಿಕರ ಆಹಾರ ವ್ಯವಸ್ಥೆ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸಲಾಗಿದೆ. ಕಾಲೇಜಿಗೆ ಪ್ರತ್ಯೇಕ ಬಸ್ ವ್ಯವಸ್ಥೆಯೂ ಇದೆ. ಅಧ್ಯಯನದ ಸಮಯದಲ್ಲಷ್ಟೇ ಅಲ್ಲ, ದಿನಪೂರ್ತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಬೋಧಕ ವೃಂದ ಇಲ್ಲಿದೆ.
ವರ್ಷವಿಡೀ ಮಹಾವಿದ್ಯಾಲಯದಲ್ಲಿ ರಚನಾತ್ಮಕ ಕಾರ್ಯಕ್ರಮಗಳು, ಸಂಶೋಧನಾತ್ಮಕ ಪ್ರಬಂಧಗಳು ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕೀರ್ಣಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕ್ಯಾಂಪಸ್ ಸೆಲೆಕ್ಷನ್‌ಗೆ ಸಾಕಷ್ಟು ಅವಕಾಶ ನೀಡುವುದರ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ ತರಬೇತಿ ಇಲ್ಲಿ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳು ಉನ್ನತ ಗುರಿ ಸಾಧಿಸಲು ನೆರವಾಗುತ್ತಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಬೇಕೆಂಬ ಉದ್ದೇಶದಿಂದ 'ಸ್ಟೀಮ್ ಎಚ್' ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನ ಪ್ರಾರಂಭಿಸಲಾಗಿದ್ದು, ಆ ಮೂಲಕ ಯುವ ವಿಜ್ಞಾನಿಗಳನ್ನು ನಾಡಿಗೆ ನೀಡಲು ಈಗಿನಿಂದಲೇ ಬುನಾದಿ ಹಾಕಲಾಗುತ್ತಿದೆ.
ಪ್ರಸ್ತುತ ಇಂಜಿನಿಯರಿಂಗ್ ಪದವಿ ವಿಭಾಗದಲ್ಲಿ ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ ಮತ್ತು ವ್ಯವಹಾರ ವ್ಯವಸ್ಥೆಗಳು, ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (BCA) ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಎಂ.ಟೆಕ್, ಎಂ.ಸಿ.ಎ ತರಗತಿಗಳಿಗೆ ಪ್ರವೇಶಗಳು ಆರಂಭವಾಗಿವೆ.
ಗುಣಮಟ್ಟದ ಶಿಕ್ಷಣ, ಸಂಸ್ಕಾರ, ಶಿಸ್ತಿನ ವಾತಾವರಣ ಮತ್ತು ವೈಯಕ್ತಿಕ ಕಾಳಜಿಯೊಂದಿಗೆ ನಿಮ್ಮ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸಲು ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಇಂದೇ ಭೇಟಿ ನೀಡಿ ಅಥವಾ ಮೊಬೈಲ್ ಸಂಖ್ಯೆ: 77955 11791 / 97315 68215 / 0831-2407172 ಗೆ ಕರೆ ಮಾಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/07/2026 07:20 pm