ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಬಿ ಡ್ಯಾಂ‌ನಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಕೊಪ್ಪಳ : ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಶ್ರೀರಾಮುಲು ಟೀಕೆ ಮಾಡಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ದೇಹಲಿಯಲ್ಲಿ ಕುಂತಾರ. ಒಂದು ವಾದದಿಂದ ದೆಹಲಿಯಲ್ಲಿ ಸಚಿವ ಸ್ಥಾನ ವಿಸ್ತರಣೆಯಲ್ಲಿ ಬ್ಯುಸಿ ಆಗಿದ್ದಾರೆ. ಪಾಪ ರಾಹುಲ್ ಗಾಂಧಿ ಸಮಯನೇ ಕೊಡುತ್ತಿಲ್ಲ. ಬಹುಷ ಡಿಕೆ ಶಿವಕುಮಾರ್ ಸೂಟ್ ಕೇಸ್ ತಗೊಂಡು ಹೋಗಿಲ್ಲ ಅನಿಸುತ್ತೆ. ಸೂಟ್ ಕೇಸ್ ಒಯ್ದಿದ್ರೆ ಬೇಗ ಅಪಾಂಟ್ಮೆಂಟ್ ಸಿಗ್ತಾಯಿತ್ತು.

ಕೊಪ್ಪಳ ಶಾಸಕರು ದೆಹಲಿಯಲ್ಲಿ ಪದವಿಗಾಗಿ ಹೊಗ್ಯಾರ. ತುಂಗಭದ್ರಾ ನೀರಿಗಾಗಿ ಬಿಜೆಪಿ ನಾಯಕರು ಹೋರಾಟ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಡೆಡ್ ಸ್ಟೋರೇಜ್ ನೀರು ಇದ್ದಾಗ ರೈತರಿಗೆ ಬೆಳೆ ಬೆಳೆಯಲು ನೀರು ಕೊಟ್ಟಿದ್ದೆ. ತುಂಗಭದ್ರಾ ನದಿಯಲ್ಲಿ 30 ಟಿಎಂಸಿ ನೀರಿತ್ತು, ರೈತರಿಗೆ ಬೆಳೆ ಬೆಳೆಯಲು ಏಕೆ ನೀರು ನೀಡುತ್ತಿಲ್ಲ?. ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ರೈತರ ರಕ್ಷಣೆ ಬದಲು ರೈತರ ಜಮೀನು ಕಬಳಿಸುವುದು ಗೊತ್ತು. ರೈತರ ಹೊಲಗಳಿಗೆ ಬೇಲಿ ಹಾಕುವುದು ರೈತರಿಗೆ ಗೊತ್ತಿದೆ. ರೈತರಿಗೆ ನೀರು ಕೊಡುವುದು ಗೊತ್ತಿಲ್ಲ. ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಕೂಡಲೇ ರೈತರಿಗೆ ಕಾಲುವೆಗಳಿಗೆ ನೀರು ಹರಿಸಬೇಕು ಅಂತ ಪ್ಪಳದಲ್ಲಿ ಶ್ರೀರಾಮುಲು ಹೇಳಿದ್ರು.

Edited By :
PublicNext

PublicNext

31/07/2026 08:37 pm

Cinque Terre

13.19 K

Cinque Terre

0

ಸಂಬಂಧಿತ ಸುದ್ದಿ