ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ರಾಘವೇಂದ್ರ ಹಿಟ್ನಾಳ್ ಹೆಚ್ಚಿನ ಪೇಮೆಂಟ್ ಮಾಡಿದ್ರೆ ಅವರಿಗೂ ಸಚಿವ ಸ್ಥಾನ ಸಿಗ್ತಿತ್ತು - ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್

ಕೊಪ್ಪಳ : ಡಿ.ಕೆ. ಶಿವಕುಮಾರ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೊಪ್ಪಳದಲ್ಲಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಡಲಾಗಿದೆ. ಒಂದು ಹಿರಿಯ ಕೋಟಾ, ಮತ್ತೊಂದು ಪೇಮೆಂಟ್ ಕೋಟಾಗೆ ಸಚಿವ ಸ್ಥಾನಕ್ಕೆ ಸಚಿವ ಸ್ಥಾನ ಸಿಕ್ಕಿದೆ ಅಂತ ಹೇಳಿದ್ರು.

ಕೊಪ್ಪಳದಲ್ಲಿ ಮಾತಾಡಿದ ಅವರು, ಚಿಕ್ಕ ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಿರುವುದು ಸಂತಸ ತಂದಿದೆ. ಹೈಕಮಾಂಡ್ ಗುರಿ ಮುಟ್ಟದೆ ಸಂಪುಟ ವಿಸ್ತರಣೆ ಸಾಧ್ಯವಿಲ್ಲ ಎಂದು ಹೇಳಿದ್ದೆ. ನಾನು ಹೇಳಿದಂತೆ ಹೈಕಮಾಂಡ್‌ಗೆ ಹಣ ಸಂದಾಯವಾಗಿದೆ. ಕೊಪ್ಪಳಕ್ಕೆ ಸಚಿವ ಸ್ಥಾನ ಸಿಕ್ಕಿದ್ದು ಹಣ ಪಾವತಿಯಿಂದ. ಹೀಗಾಗಿ ಇನ್ನೊಂದು ಜಿಲ್ಲೆಗೆ ಸಚಿವ ಸ್ಥಾನ ಸಿಗದೇ ವಂಚನೆ ಆಗಿದೆ. ಕೊಪ್ಪಳ ಶಾಸಕರು ಕೂಡ ಸ್ವಲ್ಪ ಹೆಚ್ಚು ಹಣ ಕೊಟ್ಟರೆ ಅವರಿಗೂ ಸಚಿವ ಸ್ಥಾನ ಸಿಗುತ್ತಿತ್ತು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಕೊಟ್ಟಿಲ್ಲ. ಅದಕ್ಕೆ ಸಚಿವ ಸ್ಥಾನ ಸಿಗಲಿಲ್ಲ ಅಂತ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಟೀಕಿಸಿದ್ರು.

Edited By :
PublicNext

PublicNext

03/08/2026 05:34 pm

Cinque Terre

9.55 K

Cinque Terre

0

ಸಂಬಂಧಿತ ಸುದ್ದಿ