ಕೊಪ್ಪಳ : ಮೂರು ಬಾರಿ ಶಾಸಕ ಆದ್ರೂ ಶಾಸಕ ರಾಘವೇಂದ್ರ ಹಿಟ್ನಾಳ್ ಗೆ ಮಂತ್ರಿಸ್ಥಾನ ಕೊಡದಿದ್ದಕ್ಕೆ
ಕೊಪ್ಪಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಒಂದೇ ಜಿಲ್ಲೆಗೆ ಇಬ್ಬರು ಸಚಿವರ ಆಯ್ಕೆ ಮಾಡಿದ್ದಾರೆ. ಆದ್ರೆ, ಚುನಾಯಿತ ಸಚಿವರು ಈಗಾಗಲೇ ಎರಡ್ಮೂರು ಬಾರಿ ಸಚಿವರಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಸಚಿವರನ್ನಾಗಿ ಮಾಡಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ರೂ ಮಾಡಿಲ್ಲ ಅಂತ ಟಯರ್ ಗೆ ಬೆಂಕಿ ಹಚ್ಚಿ ರಾಘವೇಂದ್ರ ಹಿಟ್ನಾಳ್ ಪರ ಕಾರ್ಯಕರ್ತರು ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ಸಚಿವ ಸ್ಥಾನ ನೀಡದೆ ಕೊಪ್ಪಳ ಕ್ಷೇತ್ರದ ಮತದಾರರಲ್ಲಿ ನಿರಾಸೆ ಮೂಡಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಏಕೈಕ ಕುರುಬ ಶಾಸಕ ರಾಘವೇಂದ್ರ ಹಿಟ್ನಾಳ್ ಆಗಿದ್ರು. ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಕುರುಬ ಸಮಾಜವನ್ನು ಸಿದ್ದರಾಮಯ್ಯ ಮುಳುಗಿಸಿದ್ರು ಅಂತ ಸಿದ್ದರಾಮಯ್ಯ ವಿರುದ್ಧವೂ ಕಾರ್ಯಕರ್ತರು ಘೋಷಣೆ ಕೂಗಿದ್ರು. ಜೊತೆಗೆ ಸಚಿವ ಸ್ಥಾನ ಕೊಡದ ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಿರುದ್ಧವೂ ಘೋಷಣೆ ಕೂಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ರು.
PublicNext
04/08/2026 07:31 am
LOADING...