ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: 'ಮಳೆ ಇಲ್ಲದೇ ಬೆಳೆ ಒಣಗಿದೆ' ರೈತ ಮಹಿಳೆ ಅಳಲು; ಪರಿಹಾರ ಕೊಡಿಸುತ್ತೇನೆಂದ ಸಚಿವ ತಂಗಡಗಿ

ಕೊಪ್ಪಳ : ಸಚಿವ ಸಂಪುಟ ಸೇರಿದ ಮಾರನೇ ದಿನವೇ ಶಿವರಾಜ್ ತಂಗಡಗಿ ಫುಲ್ ಆಕ್ಟೀವ್ ಆಗಿದ್ದಾರೆ‌. ಕೊಪ್ಪಳ ಜಿಲ್ಲೆಯಲ್ಲಿನ ಬೆಳೆ ಹಾನಿ ಪ್ರದೇಶಕ್ಕೆ ತಂಗಡಗಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಪ್ಪಳದ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಬರ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ.

ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯ ಬಾಂದ್ರಾ ಗ್ರಾಮಕ್ಕೆ ತೆರಳಿ ಬೆಳೆ ಹಾನಿ ವೀಕ್ಷಣೆ ಮಾಡಿದ್ದಾರೆ. ಬಾಂದ್ರಾ ಗ್ರಾಮದ ಹನುಮಮ್ಮ ನಾಯ್ಕ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇದೇ ವೇಳೆ ಮಳೆಯಿಲ್ಲದೆ ಬೆಳೆಗಳು ಹಾಳಾಗಿವೆ ಅಂತ ಹನುಮಮ್ಮ ಅಳಲು ತೋಡಿಕೊಂಡಿದ್ದಾರೆ.

ಇದೇ ವೇಳೆ ಮಾತಾಡಿದ ಸಚಿವ ಶಿವರಾಜ್ ತಂಗಡಗಿ, ಕಂದಾಯ ಇಲಾಖೆ ಅಧಿಕಾರಿಗಳಿಂದ ವರದಿ ಪಡೆಯುತ್ತೇನೆ. ನಾಳೆಯೇ ಅಧಿಕಾರಿಗಳೊಂದಿಗೆ ನಾನು ಸಭೆ ನಡೆಸುತ್ತೇನೆ. ಬರ ಪರಿಶೀಲನೆ ನಡೆಸುವಂತೆ ಎಲ್ಲ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಇಂದು, ನಾಳೆ ನಾಡಿದ್ದು ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಬೆಳೆಗಳ ಪರಿಸ್ಥಿತಿ ಅವಲೋಕಿಸುತ್ತೇನೆ ಅಂತ ಹೇಳಿದ್ರು.

Edited By :
PublicNext

PublicNext

05/08/2026 09:04 pm

Cinque Terre

3.81 K

Cinque Terre

0

ಸಂಬಂಧಿತ ಸುದ್ದಿ