ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ

ಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕತ್ತೆಬೆನ್ನೂರು, ಮಕರಬ್ಬಿ, ಕೋಟಿಹಾಳ ಗ್ರಾಮಗಳಲ್ಲಿ ಉಪಟಳ ನಡೆಸಿದ್ದ ಚಿರತೆ ಬುಧವಾರ ಸಂಜೆ ಬೋನಿಗೆ ಬಿದ್ದಿದೆ.

ನಾಲ್ಕು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮೇಲಧಿಕಾರಿಗಳ ನಿರ್ದೇಶನದಂತೆ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಇತ್ತೀಚಿಗೆ ಕತ್ತೆಬೆನ್ನೂರು ಮಕರಬ್ಬಿ ಮಾರ್ಗಮಧ್ಯೆ ಬೈಕ್ ಸವಾರರ ಮೇಲೆ ಚಿರತೆ ಎರಗಿತ್ತು.

ದಾಳಿಯಿಂದ ಪಾರಾಗಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಪ್ರದೇಶದಲ್ಲಿ ನಾಲ್ಕಾರು ಚಿರತೆಗಳು ಗುಂಪಾಗಿ ಓಡಾಡುವುದನ್ನು ಸಾರ್ವಜನಿಕರು ನೋಡಿದ್ದರು. ಕುರಿ, ಮೇಕೆ, ನಾಯಿಗಳನ್ನು ಹೊತ್ತೊಯ್ದು ತಿಂದು ಹಾಕಿದ್ದವು. ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿತ್ತು. ರೈತರು, ಕಾರ್ಮಿಕರು ಕೃಷಿ ಚಟುವಟಿಕೆಗಳಿಗೆ ತೆರಳಲು ಭಯಪಡುತ್ತಿದ್ದರು. ಈ ಭಾಗದ ಸಾರ್ವಜನಿಕರ ಮನವಿ ಮೇರೆಗೆ ಅರಣ್ಯ ಇಲಾಖೆಯವರು ಕೋಟಿಹಾಳ, ಕತ್ತೆಬೆನ್ನೂರು ಹಾಗೂ ಮಕರಬ್ಬಿ ಮಧ್ಯದ ಹುಣಸಿಕಟ್ಟಿ ಹಳ್ಳದಲ್ಲಿ ಬೋನು ಅಳವಡಿಸಿದ್ದರು.

'ಬೋನಿಗೆ ಬಿದ್ದ ಚಿರತೆಯನ್ನು ದರೋಜಿಯ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.'

Edited By : Nirmala Aralikatti
PublicNext

PublicNext

01/08/2026 11:42 am

Cinque Terre

4.35 K

Cinque Terre

0

ಸಂಬಂಧಿತ ಸುದ್ದಿ