ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೃಂಗೇರಿ : ಮಲೆನಾಡಲ್ಲಿ ಪುಷ್ಯ ಮಳೆಯ ಆರ್ಭಟ - ಮುಳುಗಡೆಗೊಂಡ ಕಪ್ಪೆ ಶಂಕರ ಗುಡಿ

ಶೃಂಗೇರಿ : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಪುಷ್ಯ ಮಳೆಯ ಆರ್ಭಟ ಮುಂದುವರಿದಿದ್ದು, ಸುರಿಯುತ್ತಿರುವ ಮಳೆಗೆ ಶೃಂಗೇರಿ ತಾಲೂಕು ತತ್ತರಿಸಿಹೋಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನಾದ್ಯಂತ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಮಳೆಯ ರೌದ್ರನರ್ತನದಿಂದಾಗಿ ಜೀವನದಿ ತುಂಗಾ ನದಿಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ. ನದಿಯ ಪಕ್ಕದಲ್ಲೇ ಇರುವ ಕಪ್ಪೆ ಶಂಕರ ಗುಡಿ ಮುಳುಗಡೆಯಾಗಿದೆ. ಕ್ಷಣ ಕ್ಷಣಕ್ಕೂ ನದಿಯ ನೀರಿನ ಮಟ್ಟ ಏರುತ್ತಿದೆ, ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಧಾರಾಕಾರ ಮಳೆಯಿಂದಾಗಿ ಶೃಂಗೇರಿ ಪಟ್ಟಣದ ಹಲವು ರಸ್ತೆಗಳು ಮುಳುಗಡೆಯಾಗಿವೆ. ಪಟ್ಟಣದ ಕೆಇಬಿ ವೃತ್ತದ ಆಟೋ ನಿಲ್ದಾಣ ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

Edited By :
PublicNext

PublicNext

01/08/2026 11:56 am

Cinque Terre

5.26 K

Cinque Terre

0

ಸಂಬಂಧಿತ ಸುದ್ದಿ