ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಸಾರ್ವಜನಿಕರಿಗೆ ತಲೆನೋವು ತಂದಿಟ್ಟ ಶಿರಸಿ, ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ

ಶಿರಸಿ: ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಸಂಪೂರ್ಣ ಕಾಮಗಾರಿ ಇವತ್ತಿನವರೆಗೂ ಮುಗಿದಿಲ್ಲ. ಈ ಕಾಮಗಾರಿಯಿಂದ ಸಾರ್ವಜನಿಕರು ಹಲವಾರು ರೀತಿಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಈಗಾಗಲೇ ಹಲವಾರು ಜನ ವಾಹನ ಸವಾರರು ಬಿದ್ದು ಮೃತ ಪಟ್ಟ ಪ್ರಸಂಗಗಳು ನಡೆದಿವೆ. ಹಾಗಾದರೆ ಸಾರ್ವಜನಿಕರ ಗೋಳು ಕೇಳೋರು ಯಾರು? ಎಂದು ಸ್ಥಳೀಯ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಸಂಸದರಿಗೆ ರಸ್ತೆ ಸರಿಪಡಿಸುವಂತೆ ಹಾಗೂ ನೀರು ಸರಾಗವಾಗಿ ಹರಿದು ಹೋಗಲು ಸಿಡಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ರಸ್ತೆ ಕಾಮಗಾರಿಯಿಂದ ಸೋಮನಹಳ್ಳಿ ಪ್ರವೇಶ ಮಾಡುವ ರಸ್ತೆಯಲ್ಲಿ ಸಂಪೂರ್ಣವಾಗಿ ನೀರು ನಿಂತು ಬಂದ್ ಆಗಿದೆ. ಇದರಿಂದ ಸಾರ್ವಜನಿಕರು ಬೇರೆ ಮಾರ್ಗದ ಮೂಲಕ ತಮ್ಮ ದಿನನಿತ್ಯದ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಈ ತೊಂದರೆಗೆ ಯಾರು ಹೊಣೆಗಾರರರು ಎಂದು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ.

ಅಕಸ್ಮಾತ್ ಇನ್ನೂ ಹೆಚ್ಚಿನ ಮಳೆಯಾಗಿ ನೀರಿನ ಪ್ರಮಾಣ ಹೆಚ್ಚಾದರೆ ಖಂಡಿತವಾಗಿಯೂ ರಸ್ತೆ ಪಕ್ಕದಲ್ಲಿರುವ ಮನೆಗಳಿಗೆ ಹಾನಿ ಸಾಧ್ಯತೆ ಇದ್ದು ಈಗಾಗಲೇ ನಿವಾಸಿಗಳು ಜೀವ ಭಯದಲ್ಲಿಯೇ ರಾತ್ರಿ ನಿದ್ರೆ ಇಲ್ಲದೆ ವಾಸ ಮಾಡುತ್ತಿದ್ದಾರೆ.

ಆದುದರಿಂದ ಅತಿ ಶೀಘ್ರವಾಗಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Somashekar
PublicNext

PublicNext

02/08/2026 08:25 pm

Cinque Terre

14.36 K

Cinque Terre

0

ಸಂಬಂಧಿತ ಸುದ್ದಿ