ಸಿದ್ದಾಪುರ : ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಅಪಾರ ಹಾನಿಯಾಗಿದೆ ಅಣಲೆಬೈಲ್ ಗ್ರಾಮದ ಹೇರೂರು ನಿವಾಸಿಯಾದ
ಮಹಮ್ಮದ್ ಅಲಿ ಇಬ್ರಾಹಿಂ ಸಾಬ್( 58) ಇವರ ವಾಸದ ಕಚ್ಛಾ ಮನೆ ಪೂರ್ಣ (ಶೇಕಡ 80 ಕ್ಕಿಂತ ಅಧಿಕ) ಹಾನಿಯಾಗಿದ್ದು ಅಂದಾಜು ಹಾನಿ ಮೂರು ಲಕ್ಷದ ಎಂಬತ್ತು ಸಾವಿರ ನಷ್ಟ ಉಂಟಾಗಿದೆ.
ಹಾರ್ಸಿಕಟ್ಟಾ ಪಂಚಾಯತ್ ವ್ಯಾಪ್ತಿಯ ಭಂಡಾರಕೇರಿ ಗ್ರಾಮದ ಹಾರ್ಸಿಕಟ್ಟಾ ವಾಜಗದ್ದೆ ಮುಖ್ಯ ರಸ್ತೆಯಿಂದ ಹಲಸಗಾರ ಊರಿಗೆ ಹೋಗುವ ರಸ್ತೆ cಅತಿಯಾದ ಮಳೆಯಿಂದಾಗಿ ಧರೆ ಕುಸಿದಿರುತ್ತದೆ. ಯಾವುದೇ ದೊಡ್ಡ ವಾಹನಗಳು ಓಡಾಡುತ್ತಿಲ್ಲ,
ಈ ಕುರಿತು ಗ್ರಾಮ ಪಂಚಾಯಿತಿಗೆ ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನ್ಮನೆ ಗ್ರಾಮದ ವಾಸಿಯಾದ ಹೇರಂಬ ಹುಚ್ಚ ನಾಯ್ಕ್ ಅವರ ಮಾಲಿಕತ್ವದ ಜಮೀನಿಗೆ ನೀರು ನುಗ್ಗಿ ಹಾನಿಯಾಗಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಯಿತು , ಹಾನಿಯ ಬಗ್ಗೆ ಕೃಷಿ ಇಲಾಖೆ ಅಧಿಕಾರಿಯಿಂದ ಜಂಟಿ ಸ್ಥಳ ಪರಿಶೀಲನೆ ಮಾಡಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Kshetra Samachara
02/08/2026 08:48 pm
LOADING...