ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಎಮ್ಮೆ ಖರೀದಿ : ಹೈನುಗಾರರಿಗೆ ಪ್ರೋತ್ಸಾಹ ಧನ

ಬಂಗಾರಪೇಟೆ: ಹೈನುಗಾರಿಕೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೋಲಾರ ಹಾಲು ಒಕ್ಕೂಟ (ಕೋಮುಲ್) ನೂತನ ಯೋಜನೆಗಳನ್ನು ರೂಪಿಸಿದೆ ಎಂದು ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.

ತಾಲ್ಲೂಕಿನ ಭೀಮಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ (ಡಿಸಿಎಸ್) ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಎಮ್ಮೆ ಹಾಲಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಹಾಗಾಗಿ ಎಮ್ಮೆ ಖರೀದಿಸುವ ರೈತರಿಗೆ ಒಕ್ಕೂಟದ ವತಿಯಿಂದ ₹30 ಸಾವಿರ ಪ್ರೋತ್ಸಾಹಧನ ನೀಡಲಾಗುವುದು.

ಮೇವು ಪೋಲಾಗುವುದನ್ನು ತಡೆಯಲು ರೈತರಿಗೆ ಹಂತ-ಹಂತವಾಗಿ ಚಾಪ್ ಕಟರ್, ರಬ್ಬರ್ ಮ್ಯಾಟ್ ಹಾಗೂ ಹಾಲು ಕರೆಯುವ ಯಂತ್ರಗಳನ್ನು ಒಕ್ಕೂಟದಿಂದ ವಿತರಿಸಲಾಗುವುದು. ಚಾಪ್ ಕಟರ್ ಬಳಕೆಯಿಂದ ಮೇವು ಸಣ್ಣದಾಗಿ ಕತ್ತರಿಸಲ್ಪಟ್ಟು ದನಗಳಿಗೆ ಪೌಷ್ಟಿಕ ಆಹಾರವಾಗಿ ಮಾರ್ಪಡುತ್ತದೆ. ಜೊತೆಗೆ ಹೈನುಗಾರರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ವಿದ್ಯಾರ್ಥಿವೇತನ ಮುಂದುವರಿಸಲಾಗುವುದು ಎಂದರು.

Edited By : PublicNext Desk
Kshetra Samachara

Kshetra Samachara

03/08/2026 02:50 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ