ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯ - ಕುಸಿದು ಬಿದ್ದ ಬಾಡದ ಕನಕದಾಸರ ಅರಮನೆ ರಸ್ತೆ!

ಶಿಗ್ಗಾವಿ: ಇದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೋ, ಜನಪ್ರತಿನಿಧಿಗಳ ಬೇಜವಾಬ್ದಾರಿಯೋ ಅಥವಾ ಅಧಿಕಾರಿಗಳು ಬಿಲ್ ತೆಗೆಯುವ ಜಾಗವೋ ಗೊತ್ತಿಲ್ಲ! ಕುಸಿದು ಬಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದ ಕನಕದಾಸರ ಅರಮನೆ ರಸ್ತೆ.

ಹೌದು, ಸಂತ ಕನಕದಾಸರ ಜನ್ಮಸ್ಥಳ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾದ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದ ಅರಮನೆಗೆ ಸಂಪರ್ಕಿಸುವ ಪ್ರಮುಖ ರಸ್ತೆ ಈಗ ಸಂಪೂರ್ಣ ಕುಸಿದು ಬೀಳುತ್ತಿದ್ದು, ಗ್ರಾಮಸ್ಥರು ಹಾಗೂ ವಾಹನ ಸವಾರರು ಭಯದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೆ, ಇಲ್ಲಿಯೇ ಸುಪ್ರಸಿದ್ಧ ಕನಕದಾಸರ ಜನ್ಮಸ್ಥಳ ಹಾಗೂ ಅರಮನೆ ಇದ್ದು, ದಿನನಿತ್ಯ ನೂರಾರು ಪ್ರವಾಸಿಗರು ವೀಕ್ಷಣೆಗೆ ಬರುತ್ತಾರೆ. ಆದರೆ ಈ ರಸ್ತೆ ಕುಸಿದು ಬಿದ್ದಿರುವುದಕ್ಕೆ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿಯ ಗ್ರಾಮಸ್ಥರು ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಮಸ್ಯೆಯ ಬಗ್ಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ವರದಿ: ರಮೇಶ್ ಸೋಮಕ್ಕನವರ, ಪಬ್ಲಿಕ್ ನೆಕ್ಸ್ಟ್, ಶಿಗ್ಗಾವಿ

Edited By :
PublicNext

PublicNext

03/08/2026 05:42 pm

Cinque Terre

8.77 K

Cinque Terre

0

ಸಂಬಂಧಿತ ಸುದ್ದಿ