ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆ.8ಕ್ಕೆ ಐಬಿಎಂಆರ್ ಮೆಗಾ ಪ್ಲೇಸ್ಮೆಂಟ್ ಡ್ರೈವ್ - ವಿದ್ಯಾರ್ಥಿಗಳಿಗಾಗಿ ಪ್ರಗತಿ-2026

ಹುಬ್ಬಳ್ಳಿ: ಐಬಿಎಂಆರ್ ಶಿಕ್ಷಣ ಸಂಸ್ಥೆಯು ಉತ್ತರ ಕರ್ನಾಟಕದಲ್ಲಿಯೇ ಮೊದಲ ಎಂಬಿಎ ಕಾಲೇಜು ಎಂಬ ಹೆಗ್ಗಳಿಕೆಯ ಜೊತೆಗೆ ಸಾಕಷ್ಟು ಸಾಧನೆಯನ್ನು ಮಾಡುತ್ತಾ ಬಂದಿದೆ. ಈಗ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ 16ನೇ ಮೆಗಾ ಪ್ಲೇಸ್‌ಮೆಂಟ್ ಡ್ರೈವ್ "PRAGATI-2026" ಆಯೋಜಿಸಿದೆ.

ವಾಣಿಜ್ಯನಗರೊಯನ್ನು ಎಜುಕೇಶನ್ ಹಬ್ ಮಾಡಲು ಪಣತೊಟ್ಟಿರುವ ಐಬಿಎಂಆರ್ ಶಿಕ್ಷಣ ಸಂಸ್ಥೆಯು, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ನನಸು ಮಾಡುತ್ತಿದೆ. ಹೌದು.. ಕ್ಲಿಕ್ ನೌಕರಿ ಹಾಗೂ ಗ್ರೋವ್ ಮಿಂಟ್ ಗ್ಲೋಬಲ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಬಹುದೊಡ್ಡ ಪ್ಲೇಸ್‌ಮೆಂಟ್ ಡ್ರೈವ್ ಅನ್ನು ಇದೇ ಆಗಸ್ಟ್ 8ರಂದು ಹುಬ್ಬಳ್ಳಿಯ ಐಬಿಎಂಆರ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.

ಒಂದೇ ಸೂರಿನಡಿ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 2,000ಕ್ಕೂ ಅಧಿಕ ಉದ್ಯೋಗಾವಕಾಶ ನೀಡುವ ಬೃಹತ್ ಮೇಳವಾಗಿ 'ಪ್ರಗತಿ-2026' ನಡೆಯಲಿದೆ. ಈ ಪ್ಲೇಸ್‌ಮೆಂಟ್ ಡ್ರೈವ್‌ನಲ್ಲಿ ಪ್ರತಿಷ್ಠಿತ ಎಂಎನ್‌ಸಿ (MNC), ಎಂಎಸ್‌ಎಂಇ (MSME), ಸ್ಟಾರ್ಟ್‌ಅಪ್ ಹಾಗೂ ವಿವಿಧ ಇಂಡಸ್ಟ್ರಿ ಕಂಪನಿಗಳು ಸೇರಿದಂತೆ ನೂರಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸಲಿವೆ.

ಉತ್ತರ ಕರ್ನಾಟಕದ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನಿಮ್ಮ ಭವಿಷ್ಯದ ಕನಸನ್ನು ಸಾಕಾರಗೊಳಿಸಲು ಇಂದೇ ನೋಂದಣಿ ಮಾಡಿಸಿ. ಇನ್ನೇಕೆ ತಡ?

ನೋಂದಣಿಗಾಗಿ ಸಂಪರ್ಕಿಸಿ: 9015777101

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/08/2026 07:58 pm

Cinque Terre

66.22 K

Cinque Terre

0

ಸಂಬಂಧಿತ ಸುದ್ದಿ