ಬೆಳಗಾವಿ: ಕಸ ಎಂದರೆ ಮೂಗು ಮುಚ್ಚುವ ಕಾಲ ಇದು... ಆದರೆ ಅದೇ ಕಸದಿಂದ ರೈತರ ಪಾಲಿಗೆ ಅಮೃತ ಸೃಷ್ಟಿಯಾಗುತ್ತಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಶಿಯಲ್ಲಿ ಎಸ್‌ಜೆಪಿಎನ್ (SJPN) ಟ್ರಸ್ಟ್ ಕಾಲೇಜಿನ 'ಹರ್ಮಿ ಸಾವಯವ ಗೊಬ್ಬರ' ಘಟಕ ಈಗ ರಾಜ್ಯದ ಗಮನ ಸೆಳೆದಿದ್ದು, 'ಝೀರೋ ವೇಸ್ಟ್' (Zero Waste) ಪರಿಕಲ್ಪನೆಗೆ ಹೊಸ ಅರ್ಥ ನೀಡಿದೆ.
ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಘಟಕದಲ್ಲಿ, ಪ್ರತಿದಿನದ ಹಸಿ ತ್ಯಾಜ್ಯವನ್ನು ವಿಶೇಷ ಕೀಟಗಳ ಸಹಾಯದಿಂದ ಸಾವಯವ ಗೊಬ್ಬರ ಮತ್ತು ಲಿಕ್ವಿಡ್ ಸ್ಲರಿಯಾಗಿ ಪರಿವರ್ತಿಸಲಾಗುತ್ತಿದೆ. ಇಷ್ಟೊಂದು ತ್ಯಾಜ್ಯ ಸಂಸ್ಕರಣೆಯಾಗುತ್ತಿದ್ದರೂ ಯಾವುದೇ ದುರ್ವಾಸನೆ ಇಲ್ಲದಿರುವುದು ಈ ಯೋಜನೆಯ ಅಚ್ಚರಿ.
ಇಲ್ಲಿ ತಯಾರಾಗುವ ಲಿಕ್ವಿಡ್ ಸ್ಲರಿ ರೈತರ ಪಾಲಿಗೆ ಸಂಜೀವಿನಿಯಾಗಿದೆ. ಸಾವಯವ ಗೊಬ್ಬರ, ನೈಸರ್ಗಿಕ ಕೀಟನಾಶಕ ಮತ್ತು ಪ್ಲಾಂಟ್ ಬೂಸ್ಟರ್ ಆಗಿ ಕೆಲಸ ಮಾಡುತ್ತಿರುವ ಈ ದ್ರವ ಗೊಬ್ಬರದಿಂದ ಈಗಾಗಲೇ ಸಾವಿರಕ್ಕೂ ಹೆಚ್ಚು ರೈತರು ಉತ್ತಮ ಇಳುವರಿ ಪಡೆದಿದ್ದಾರೆ.
ನಿಡಸೋಶಿಯಲ್ಲಿ ಯಶಸ್ಸು ಕಂಡ ಈ ಮಾದರಿ ಈಗ ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸುತ್ತಿದೆ. ಬೆಳಗಾವಿಯಲ್ಲಿ ಬೃಹತ್ ಘಟಕ ನಿರ್ಮಾಣವಾಗುತ್ತಿದ್ದು, ಮಂಗಳೂರಿನಲ್ಲಿ ಐದು ಘಟಕಗಳು ಆರಂಭವಾಗಿವೆ. ಸ್ಥಳೀಯ ಸಂಸ್ಥೆಗಳು ಈ ಮಾದರಿಯನ್ನು ಅಳವಡಿಸಿಕೊಂಡರೆ, ಕರ್ನಾಟಕವೇ ಝೀರೋ ವೇಸ್ಟ್ ರಾಜ್ಯವಾಗುವ ದಿನ ದೂರವಿಲ್ಲ ಎಂದು ನಿಡಸೋಸಿ ಸಿದ್ದಸಂಸ್ಥಾನ ಮಠದ ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
04/08/2026 10:35 am
LOADING...