ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸದಲ್ಲಿ ಭೀಕರ ಗುಡ್ಡ ಕುಸಿತ : ಬೆಳೆಸಹಿತ ಕಾಫಿ ತೋಟ ನಾಶ, ಕೂದಲೆಳೆ ಅಂತರದಲ್ಲಿ ದಂಪತಿ ಪಾರು

ಕಳಸ/ಚಿಕ್ಕಮಗಳೂರು: ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕಳಸ ತಾಲೂಕಿನಲ್ಲಿ ಮತ್ತೊಮ್ಮೆ ಪ್ರಕೃತಿ ತಾಂಡವವಾಡಿದೆ. ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸರಿಕಲ್ ಗ್ರಾಮದಲ್ಲಿ ಸಂಭವಿಸಿರುವ ಗುಡ್ಡ ಕುಸಿತಕ್ಕೆ ಬಡ ಕುಟುಂಬವೊಂದರ ಜೀವನಾಧಾರವಾಗಿದ್ದ ಕಾಫಿ ತೋಟ ಸಂಪೂರ್ಣ ನೆಲಸಮವಾಗಿದೆ.

ಬಸರಿಕಲ್ ಗ್ರಾಮದ ನಿವಾಸಿ ಕೃಷ್ಣಪ್ಪ ಎಂಬುವರಿಗೆ ಸೇರಿದ ಸಣ್ಣ ತೋಟದಲ್ಲಿ ಈ ದುರಂತ ಸಂಭವಿಸಿದೆ. ದಿನಂಪ್ರತಿಯಂತೆ ಕೃಷ್ಣಪ್ಪ ಮತ್ತು ಅವರ ಪತ್ನಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ, ಒಮ್ಮೆಲೇ ಬೆಟ್ಟದ ಮೇಲಿಂದ ಬೃಹತ್ ಗಾತ್ರದ ಬಂಡೆಗಳು ಹಾಗೂ ಅಪಾರ ಪ್ರಮಾಣದ ಮಣ್ಣು ಉರುಳಿಬಿದ್ದಿದೆ. ಕಣ್ಣೆದುರೇ ಧರೆಗುರುಳಿದ ಬಂಡೆಯನ್ನು ಕಂಡು ತಕ್ಷಣ ಜಾಗರೂಕರಾದ ದಂಪತಿ ಪ್ರಾಣಭಯದಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.

ಈ ಭೀಕರ ಭೂಕುಸಿತದಿಂದಾಗಿ ತೋಟದಲ್ಲಿದ್ದ ಕಾಫಿ, ಮೆಣಸು ಹಾಗೂ ಏಲಕ್ಕಿ ಬೆಳೆಗಳು ಮಣ್ಣಿನಡಿಯಲ್ಲಿ ಹೂತುಹೋಗಿದ್ದು, ಈ ಕುಟುಂಬದ ಏಕೈಕ ಜೀವನೋಪಾಯವೇ ನಾಶವಾಗಿದೆ. ಮಳೆ ಹೆಚ್ಚಾಗುತ್ತಿದ್ದಂತೆ ಮಣ್ಣು ಮತ್ತಷ್ಟು ಕುಸಿಯುತ್ತಿದ್ದು, ಅಪಾರ ನಷ್ಟಕ್ಕೊಳಗಾಗಿರುವ ಕುಟುಂಬಸ್ಥರು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕೆಂದು ಕಣ್ಣೀರಿಟ್ಟಿದ್ದಾರೆ.

Edited By :
PublicNext

PublicNext

04/08/2026 01:34 pm

Cinque Terre

7.74 K

Cinque Terre

0

ಸಂಬಂಧಿತ ಸುದ್ದಿ