ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

14ನೇ 'ಬೆಂಗಳೂರು ಇಂಡಿಯಾ ನ್ಯಾನೋ' ಸಮ್ಮೇಳನ ಉದ್ಘಾಟಿಸಿದ ಸಿಎಂ ಡಿ. ಕೆ. ಶಿವಕುಮಾರ್.!

ಬೆಂಗಳೂರು: ರಾಜಧಾನಿಯ ಖಾಸಗಿ ಹೋಟೆಲ್‌ನಲ್ಲಿ 14ನೇ ಆವೃತ್ತಿಯ 'ಬೆಂಗಳೂರು ಇಂಡಿಯಾ ನ್ಯಾನೋ' ಸಮ್ಮೇಳನಕ್ಕೆ ಮಂಗಳವಾರ ವಿಜೃಂಭಣೆಯ ಚಾಲನೆ ದೊರೆಯಿತು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ 'ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್' ಜಂಟಿಯಾಗಿ ಆಯೋಜಿಸಿರುವ ಈ ಪ್ರತಿಷ್ಠಿತ ಸಮಾವೇಶವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಸಾಧನೆ ಹಾಗೂ ನ್ಯಾನೋ ತಾಂತ್ರಿಕತೆಯ ಭವಿಷ್ಯದ ಕುರಿತು ಬೆಳಕು ಚೆಲ್ಲಿದ ಈ ಕಾರ್ಯಕ್ರಮದಲ್ಲಿ, ದೇಶ-ವಿದೇಶಗಳ ಪ್ರಮುಖ ನಾಯಕರು, ಉದ್ಯಮಿಗಳು ಹಾಗೂ ವಿಜ್ಞಾನಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಹಾಗೂ ವಿಜ್ಞಾನ-ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್‌ನ ಗೌರವಾಧ್ಯಕ್ಷರಾದ 'ಭಾರತ ರತ್ನ' ಪ್ರೊ. ಸಿ.ಎನ್.ಆರ್. ರಾವ್ ಹಾಗೂ ಅವರ ಧರ್ಮಪತ್ನಿ ಇಂದುಮತಿ ರಾವ್ ಅವರ ಉಪಸ್ಥಿತಿ ವಿಶೇಷ ಮೆರುಗು ನೀಡಿತು.

ಇದೇ ವೇಳೆ ತಂತ್ರಜ್ಞಾನ ಕ್ಷೇತ್ರದ ಗಣ್ಯರಾದ ಲ್ಯಾಮ್ ರಿಸರ್ಚ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಂಗೇಶ್ ರಾಘವನ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್. ಕೆ. ಅತೀಕ್, ಮತ್ತು ವಿದ್ಯುನ್ಮಾನ, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನ್ಯಾನೋ ತಂತ್ರಜ್ಞಾನದ ಹೊಸ ಸಂಶೋಧನೆಗಳು ಮತ್ತು ಉದ್ಯಮ ರಂಗದ ಅಭಿವೃದ್ಧಿಗೆ ಈ ಸಮ್ಮೇಳನ ಪ್ರಮುಖ ವೇದಿಕೆಯಾಗಲಿದೆ.

Edited By :
PublicNext

PublicNext

04/08/2026 04:38 pm

Cinque Terre

3.72 K

Cinque Terre

0

ಸಂಬಂಧಿತ ಸುದ್ದಿ