ಸ್ಟೈಲಿಶ್ ಲುಕ್‌ನಲ್ಲಿ ನಿರಂಜನ್ – ಕ್ಯೂಟ್ ಆಗಿ ಮಿಂಚಿದ ರಚನಾ - ಸೋಷಿಯಲ್ ಮೀಡಿಯಾದಲ್ಲಿ 'ಸ್ಪಾರ್ಕ್' ಸಾಂಗ್ ವೈರಲ್
ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಈಗ 'ಸ್ಪಾರ್ಕ್' ಸಿನಿಮಾದ್ದೇ ಹವಾ . ಹೌದು... ಯುವ ನಟ ನಿರಂಜನ್ ಸುಧೀಂದ್ರ ಹಾಗೂ ಚಾರ್ಮಿಂಗ್ ನಟಿ ರಚನಾ ಇಂದರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ 'ಸ್ಪಾರ್ಕ್' ಸಿನಿಮಾದ ಹೊಸ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.
'ನೆನಪಿರಲಿ' ಪ್ರೇಮ್ ಅವರ ಪ್ರಮುಖ ಪಾತ್ರ ಹಾಗೂ ಸಚಿನ್ ಬಸ್ರೂರ್ ಅವರ ಜಾದೂಗಿರಿ ಮ್ಯೂಸಿಕ್‌ನಲ್ಲಿ ಮೂಡಿಬಂದಿರುವ ಈ ಸಾಂಗ್, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದು ಹೊಸ ದಾಖಲೆ ಬರೆಯುತ್ತಿದೆ.
'ಜೇಮ್ಸ್' ಹಾಗೂ 'ಭರಾಟೆ'ಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವವಿರುವ ನಿರ್ದೇಶಕ ಡಿ. ಮಹಾಂತೇಶ ಹಂದ್ರಾಳ್ ಈ ಚಿತ್ರವನ್ನು ಅತ್ಯಂತ ಅದ್ಧೂರಿಯಾಗಿ ನಿರ್ದೇಶಿಸಿದ್ದು, ಗರಿಮಾ ಅವಿನಾಶ್ ವಸಿಷ್ಠ ಅವರು 'ಗರಿಮಾ ಅವಿನಾಶ್ ಪ್ರೊಡಕ್ಷನ್' ಬ್ಯಾನರ್ ಅಡಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಿರ್ಮಿಸಿದ್ದಾರೆ.
ಹಾಡಿನಲ್ಲಿ ನಿರಂಜನ್ ಸುಧೀಂದ್ರ ಅವರ ಸ್ಟೈಲಿಶ್ ಲುಕ್ ಹಾಗೂ ರಚನಾ ಇಂದರ್ ಅವರ ಕ್ಯೂಟ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಹಾಡು ಜೋರ್ ಸೌಂಡ್ ಮಾಡುತ್ತಿದ್ದು, ಸಿನಿಮಾದ ಮೇಲಿರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
PublicNext
04/08/2026 08:05 pm
LOADING...