ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಹರಿ ಮ್ಯೂಸಿಕ್‌ನಲ್ಲಿ 'ಶಕ ಲಕ' ಹವಾ - ಮಾಸ್ ಎನರ್ಜಿಯಲ್ಲಿ ನಿರಂಜನ್ ಸುಧೀಂದ್ರ-ರಚನಾ ಇಂದರ್!

ಬೆಂಗಳೂರು : ಬಹುನಿರೀಕ್ಷಿತ 'ಸ್ಪಾರ್ಕ್' ಸಿನಿಮಾದಿಂದ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ ಮೊದಲ ಸಿಂಗಲ್ ಸಾಂಗ್ 'ಶಕ ಲಕ' ಈಗ ಅಧಿಕೃತವಾಗಿ ಬಿಡುಗಡೆಯಾಗಿದೆ. ಸಚಿನ್ ಬಸ್ರೂರು ಅವರ ಧಮಾಕ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡುತ್ತಿದೆ.ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ಅಭಿನಯದ ಈ ಹಾಡಿಗೆ ಲವ್‌ ಮತ್ತು ಮಾಸ್‌ ಸ್ಪರ್ಶ ಸಿಕ್ಕಿದ್ದು, 'ಲವ್ ಒಂಥರಾ ಮ್ಯಾಜಿಕ್' ಎನ್ನುವ ಸಾಲುಗಳು ಯುವಜನತೆಯ ಮನಗೆಲ್ಲುತ್ತಿವೆ. ಲವ್ಲಿ ಸ್ಟಾರ್ ಪ್ರೇಮ್ ಸೇರಿದಂತೆ ಚಿತ್ರತಂಡದ ಕೊಡುಗೆ ಹಾಗೂ ಕ್ಲ್ಯಾಪ್ ಬೋರ್ಡ್ ಪ್ರೊಡಕ್ಷನ್ ನಿರ್ಮಾಣದ ಈ ಎನರ್ಜಿಟಿಕ್ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.ನಿಮ್ಮ ಪ್ಲೇಲಿಸ್ಟ್‌ಗೆ ಹೊಸ ಹವಾ ಸೇರಿಸಲು 'ಶಕ ಲಕ' ಸಾಂಗ್ ಯೂಟ್ಯೂಬ್‌ನಲ್ಲಿ ಲಭ್ಯವಿದ್ದು ಈಗಲೇ ನೋಡಿ ಆನಂದಿಸಿ.

Edited By :
PublicNext

PublicNext

05/08/2026 08:40 pm

Cinque Terre

7.19 K

Cinque Terre

0

ಸಂಬಂಧಿತ ಸುದ್ದಿ