ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕೋಲಾರ ಶಾಸಕರು ನನ್ನ ಬಳಿ ಸಚಿವ ಸ್ಥಾನ ಕೇಳಿದ್ದರೆ ಹೈಕಮಾಂಡ್ ಜತೆ ಮಾತನಾಡುತ್ತಿದ್ದೆ - ಸಚಿವ ಕೆ. ಹೆಚ್. ಮುನಿಯಪ್ಪ

ಬೆಂಗಳೂರು : ಕೋಲಾರ ಶಾಸಕರಿಗೆ ಮಂತ್ರಿಸ್ಥಾನ ಸಿಗದಿದ್ದಕ್ಕೆ ಸಚಿವ ಕೆ. ಹೆಚ್. ಮುನಿಯಪ್ಪ ಮೇಲೆ ಶಾಸಕರು ಆರೋಪ ಮಾಡಿದ್ದಾರೆ. "ನಮಗೆ ಮಂತ್ರಿಸ್ಥಾನ ಸಿಗದೆ ಇರಲು ಸಚಿವ ಕೆ. ಹೆಚ್. ಮುನಿಯಪ್ಪ ಪಾತ್ರವಿದೆ" ಎಂಬ ಕೋಲಾರದ ಶಾಸಕರ ಆರೋಪಕ್ಕೆ ಸಚಿವ ಕೆ. ಹೆಚ್. ಮುನಿಯಪ್ಪ ತಿರುಗೇಟು ಕೊಟ್ಟಿದ್ದಾರೆ.

"ಅವರು ನನ್ನ ಬಳಿ ಬಂದು ಕೇಳಿಲ್ಲ, ಒಂದು ವೇಳೆ ಕೇಳಿದ್ದರೆ ಹೈಕಮಾಂಡ್ ಬಳಿ ಮಾತನಾಡುತ್ತಿದ್ದೆ. ಮುಖ್ಯಮಂತ್ರಿಗಳ ಬಳಿ, ಸಿದ್ದರಾಮಣ್ಣನವರ ಬಳಿ, ಹರಿಪ್ರಸಾದ್ ಬಳಿ ಹೇಳಬಹುದಾಗಿತ್ತು. ಯಾಕೆ ಅವರು ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ, ಕೇಳಿದ್ದರೆ ನನ್ನ ಕರ್ತವ್ಯವಿತ್ತು. ನಾನು ಅವರನ್ನೆಲ್ಲ ಕರೆದುಕೊಂಡು ಹೋಗಿ, ಇವರು ಹಿರಿಯರಿದ್ದಾರೆ, ಕೆಲಸ ಮಾಡಿದ್ದಾರೆ, ಮಂತ್ರಿಸ್ಥಾನ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದೆ ಎಂದರು.

Edited By :
PublicNext

PublicNext

05/08/2026 04:35 pm

Cinque Terre

4.79 K

Cinque Terre

0

ಸಂಬಂಧಿತ ಸುದ್ದಿ