ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ರೋಹನ್ ಕಾರ್ಪೊರೇಶನ್ ವತಿಯಿಂದ 'ಫ್ರೀಡಮ್ ಪ್ಯಾಲೆಟ್ 2026' ಚಿತ್ರಕಲಾ ಸ್ಪರ್ಧೆ

ಮಂಗಳೂರು : ಭಾರತದ 80ನೇ ಸ್ವಾತಂತ್ರೋತ್ಸವದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ರೋಹನ್ ಕಾರ್ಪೊರೇಶನ್, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ 'ಫ್ರೀಡಮ್ ಪ್ಯಾಲೆಟ್ 2026' ಹೆಸರಿನ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದೆ.

ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಭಾಗವಹಿಸುವವರು ಸ್ವಾತಂತ್ರೋತ್ಸವದ ವಿಷಯವನ್ನಾಧರಿಸಿ ಚಿತ್ರವನ್ನು ರಚಿಸಿ, 10 ಆಗಸ್ಟ್ ಒಳಗಾಗಿ ರೋಹನ್ ಕಾರ್ಪೊರೇಶನ್‌ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಲಿಂಕ್ ಅಥವಾ QR ಕೋಡ್ ಮೂಲಕ ಸಲ್ಲಿಸಬಹುದಾಗಿದೆ. ಮನೆ ಅಥವಾ ಶಾಲೆಯಲ್ಲಿಯೇ ಚಿತ್ರವನ್ನು ರಚಿಸಿ ಅಪ್‌ಲೋಡ್ ಮಾಡಲು ಅವಕಾಶವಿದ್ದು, ಸಲ್ಲಿಕೆಯಾಗುವ ಎಲ್ಲಾ ಚಿತ್ರಗಳ ಪೈಕಿ ಅತ್ಯುತ್ತಮ 60 ಚಿತ್ರಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. 'ಫ್ರೀಡಮ್ ಪ್ಯಾಲೆಟ್ 2026'ರ ಅಧಿಕೃತ ತೀರ್ಪುಗಾರರ ಸಹಭಾಗಿಯಾಗಿ ಪಿಕ್ಸ‌ನ್‌ಸಿಲ್ ಕೈಜೋಡಿಸಿದೆ.

ಅಂತಿಮ ಸುತ್ತು 2026ರ ಆಗಸ್ಟ್ 13ರಂದು ಮಂಗಳೂರಿನ ಬಿಜೈನಲ್ಲಿರುವ ರೋಹನ್ ಸಿಟಿಯಲ್ಲಿ ನಡೆಯಲಿದ್ದು, ಆಯ್ಕೆಯಾದ ಸ್ಪರ್ಧಿಗಳು ನೇರ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಂತಿಮ ಸುತ್ತಿನ ವಿಷಯವನ್ನು ಒಂದು ದಿನ ಮುಂಚಿತವಾಗಿ ಪ್ರಕಟಿಸಲಾಗುವುದು. ಸ್ಪರ್ಧೆಗೆ ಅಗತ್ಯವಿರುವ ಎಲ್ಲಾ ಚಿತ್ರಕಲಾ ಸಾಮಗ್ರಿಗಳನ್ನು ಆಯೋಜಕರೇ ಒದಗಿಸಲಿದ್ದಾರೆ.

ವಿಜೇತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ ₹25,000, ದ್ವಿತೀಯ ಬಹುಮಾನವಾಗಿ 15,000, ತೃತೀಯ ಬಹುಮಾನವಾಗಿ ₹10,000 ನೀಡಲಾಗುವುದು. ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ ಎಲ್ಲಾ ಸ್ಪರ್ಧಿಗಳಿಗೂ ಅವರ ಪ್ರತಿಭೆ ಮತ್ತು ಭಾಗವಹಿಸುವಿಕೆಯನ್ನು ಗೌರವಿಸಿ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.

ಪೋಷಕರು ತಮ್ಮ ಮಕ್ಕಳ ಚಿತ್ರಗಳನ್ನು 2026ರ ಆಗಸ್ಟ್ 10ರೊಳಗೆ ಕಳುಹಿಸುವಂತೆ ಸೂಚಿಸಲಾಗಿದೆ. ಅಂತಿಮ ಸುತ್ತಿಗೆ ಆಯ್ಕೆಯಾದ ಸ್ಪರ್ಧಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ರೋಹನ್ ರೋಹನ್ ಕಾರ್ಪೊರೇಶನ್ ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಸಂಪರ್ಕಿಸಿ: +91 9035511821

Edited By :
PublicNext

PublicNext

05/08/2026 06:23 pm

Cinque Terre

3.97 K

Cinque Terre

0

ಸಂಬಂಧಿತ ಸುದ್ದಿ