ಬೆಳಗಾವಿ : ದೇಶದ ವಿವಿಧ ಭಾಗಗಳ ತಜ್ಞರ, ಸಂಶೋಧಕರ ಹಾಗೂ ಸಂಶೋಧನಾ ನಿರತ ವಿದ್ಯಾರ್ಥಿಗಳ ಮಹಾಸಂಗಮವಾಗಿರುವ 'ಅಗಮ್ಯ ಟೆಕ್ ಸಮಿಟ್' ಅನ್ನು ಆಗಸ್ಟ್ 29 ಮತ್ತು 30 ರಂದು ಬೆಳಗಾವಿಯ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ತಿಳಿಸಿದ್ದಾರೆ.
ಸ್ಟೀಮ್-ಎಚ್ (STEAM-H) ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನದ ಸಹಯೋಗ ಹಾಗೂ ಕಾಲೇಜಿನ ಸೆಂಟರ್ ಆಫ್ ಎಕ್ಸಲೆನ್ಸ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಎರಡು ದಿನಗಳ ಕಾಲ ಜರುಗುವ ಈ ರಾಷ್ಟ್ರೀಯ ಸಮಾವೇಶವನ್ನು 'ಸಂಶೋಧನೆ ಮತ್ತು ನವೀನತೆ' ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿದೆ.
ಸಮಾವೇಶದಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞರು, ಸಂಶೋಧಕರು, ಕೈಗಾರಿಕೋದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ನೂತನ ಸಂಶೋಧನೆ ಮತ್ತು ತಾಂತ್ರಿಕ ನವೀನತೆ ಕುರಿತು ಪರಸ್ಪರ ಸಮಾಲೋಚನೆ ನಡೆಸಲಿದ್ದಾರೆ. ಇದರ ಜೊತೆಗೆ ದೇಶದ ಹೆಸರಾಂತ ತಜ್ಞರ ಮುಖ್ಯ ಉಪನ್ಯಾಸಗಳು, ತಾಂತ್ರಿಕ ಅಧಿವೇಶನಗಳು, ನವೀನ ಆವಿಷ್ಕಾರಗಳ ಪ್ರದರ್ಶನ ಇಲ್ಲಿ ನಡೆಯಲಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
05/08/2026 06:49 pm
LOADING...