ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡರಗಿ: ನಿಯಮಬದ್ಧ ಕೆಲಸ, ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಬುನಾದಿ

ಮುಂಡರಗಿ: ವಿಬಿಜಿ ರಾಮ್‌ಜಿ ಯೋಜನೆ ಗ್ರಾಮೀಣ ಭಾಗದ ಬಡ ಕೂಲಿಕಾರರಿಗಾಗಿಯೇ ಇರುವ ಯೋಜನೆ. ನಿಯಮಬದ್ಧವಾಗಿ ಕೆಲಸ ಮಾಡಿದರೆ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಬುನಾದಿಯಾಗಲಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಬೆಣ್ಣೆ ಹೇಳಿದರು.

ತಾಲೂಕಿನ ಡಂಬಳ ಗ್ರಾಮದ ವಿಬಿಜಿ ರಾಮ್‌ಜಿ ಯೋಜನೆಯಡಿ ಪ್ರಗತಿಯಲ್ಲಿರುವ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ರೋಜಗಾರ್ ದಿನಾಚರಣೆ ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿಜಿ ರಾಮ್‌ಜಿ ಯೋಜನೆಯಡಿ 125 ದಿನಗಳ ಕೆಲಸ ಎಲ್ಲರಿಗೂ ದೊರೆಯಲಿದೆ. ಕೂಲಿಮೊತ್ತವು 382 ರೂಪಾಯಿಗಳಿಗೆ ಏರಿಕೆಯಾಗಿದೆ. ಗ್ರಾಮೀಣ ಭಾಗದ ಸಾರ್ವಜನಿಕರು ಗುಳೆ ಹೋಗದೆ ತಮ್ಮ ಊರಿನಲ್ಲಿ ಸರ್ಕಾರ ನಿಗದಿಪಡಿಸಿದ ದಿನಗಳ ವರೆಗೆ ಕೆಲಸ ಮಾಡಿ ವೈಯಕ್ತಿಕ ಕಾಮಗಾರಿಗಳ ಲಾಭ ಪಡೆದುಕೊಳ್ಳಬಹುದು ಎಂದರು.

ವಿಬಿಜಿ ರಾಮ್‌ಜಿ ಯೋಜನೆ ಸಹಾಯಕ ನಿರ್ದೇಶಕ ವಿಶ್ವನಾಥ ಹೊಸಮನಿ ಮಾತನಾಡಿ, ಗ್ರಾಮೀಣ ಭಾಗದ ಜನರ ಅಭ್ಯುದಯಕ್ಕಾಗಿ ಇರುವ ಯೋಜನೆಗೆ ಹೆಚ್ಚೆಚ್ಚು ಕೂಲಿ ಕಾರ್ಮಿಕರು ಭಾಗವಹಿಸಿದರೆ ಹೆಚ್ಚೆಚ್ಚು ಕೆಲಸ ನೀಡಬಹುದು. ಗ್ರಾಪಂ ಕಚೇರಿಗೆ ನಮೂನೆ ಆರರ ಮೂಲಕ ಅರ್ಜಿ ಸಲ್ಲಿಸಿದರೆ ಕೆಲಸ ದೊರೆಯಲಿದ್ದು, ಕೂಲಿ ಮೊತ್ತವು ಏರಿಕೆಯಾಗಿರುವುದು ಖುಷಿ ಸಂಗತಿ ಎಂದರು. ಪಿಡಿಓ ಪಾರ್ವತಿ ಹೊಂಬಳ ಸೇರಿದಂತೆ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

04/09/2026 09:05 pm

Cinque Terre

5.52 K

Cinque Terre

0

ಸಂಬಂಧಿತ ಸುದ್ದಿ