ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: 'ಬರ ಪೀಡಿತ' ಎಂದು ಘೋಷಿಸಲು ಆಗ್ರಹಿಸಿ ನಾಳೆ ನರಗುಂದ ಬಂದ್

ನರಗುಂದ: ನಾಳೆ ಮಹದಾಯಿ ಮಹಾವೇದಿಕೆ ಹಾಗೂ ವಿವಿಧ ರೈತ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲೆಯ ಏಳು ತಾಲೂಕಿನ ಪೈಕಿ ಗಜೇಂದ್ರಗಡ ತಾಲೂಕನ್ನು ಮಾತ್ರ ಘೋಷಣೆ ಮಾಡಿರುವುದನ್ನು ಖಂಡಿಸಿ ಹಾಗೂ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ನರಗುಂದ ತಾಲೂಕು ಬಂದ್ ಗೆ ಕರೆ ನೀಡಲಾಗಿದೆ.

ಜೊತೆಗೆ ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳೆಂದು ಸರಕಾರ ಘೋಷಿಸದೆ ರೈತರನ್ನು ಕೈ ಬಿಟ್ಟಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರಗುಂದ ತಾಲೂಕಿನಲ್ಲಿ ಮಳೆ ಮಾಪನ ಕೇಂದ್ರಗಳು ಹಾಳಾಗಿದ್ದು, ಮಳೆ ಆಗದಿದ್ದರೂ ಮಳೆಯಾಗಿದೆ ಎಂದು ವರದಿ ನೀಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಸರಿಯಾಗಿ ವೀಕ್ಷಣೆ ನಡೆಸಿದ್ದರೆ ಬರದ ವಾಸ್ತವಾಂಶ ಗೊತ್ತಾಗುತ್ತಿತ್ತು ಎಂದು ಕಿಡಿ ಕಾರಿದ ರೈತರು, ಮಳೆ ಕೊರತೆಯಿಂದ ರೈತರ ಬೆಳೆಗಳು ಒಣಗಿ ಹೋಗಿದ್ದು ನಾಳೆ ಬೆಳಗ್ಗೆ 6ರಿಂದ ಸಂಜೆ 5ರ ವರೆಗೆ ನರಗುಂದ ಸಂಪೂರ್ಣ ಬಂದ್ ಗೆ ಕರೆ ನೀಡಲಾಗಿದೆ. ಸಾರಿಗೆ ಬಸ್, ಖಾಸಗಿ ವಾಹನ ಸಂಚಾರ, ಹೋಟೆಲ್ ಹಾಗೂ ವ್ಯಾಪಾರ ವಹಿವಾಟು ಸ್ಥಗಿತವಾಗಲಿದೆ ಎಂದು ರೈತ ಮುಖಂಡ ಶಂಕರ ಅಂಬಲಿ ತಿಳಿಸಿದ್ದಾರೆ.

Edited By :
PublicNext

PublicNext

11/09/2026 10:06 pm

Cinque Terre

12.51 K

Cinque Terre

1

ಸಂಬಂಧಿತ ಸುದ್ದಿ