ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಮುರ್ಡೇಶ್ವರದಲ್ಲಿ ಬಿಲ್ವಾರ್ಚನೆ ಭವ್ಯತೆ; ಸಾವಿರಾರು ಭಕ್ತ ವೃಂದ ಧನ್ಯತೆ

ಭಟ್ಕಳ: ಶ್ರಾವಣ ಮಾಸ ಕೃಷ್ಣ ಪಕ್ಷ ಏಕಾದಶಿಯ ಸೋಮವಾರದಂದು ಲೋಕಕಲ್ಯಾಣ ಹಾಗೂ ಸಕಲರ ಶ್ರೇಯೋಭಿವೃದ್ಧಿಗಾಗಿ ಮಾತೋಬಾರ ಶ್ರೀ ಮುರ್ಡೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಭವ್ಯ ಬಿಲ್ವಾರ್ಚನೆ ನೆರವೇರಿಸಲಾಯಿತು.

ಸೋಮವಾರ ಬೆಳಗ್ಗೆ 9 ಗಂಟೆಯೊಳಗೆ ಭಕ್ತರು ತಮ್ಮ ಮನೆಗಳಿಂದ ತಂದ 108 ಬಿಲ್ವಪತ್ರೆಗಳನ್ನು ಶ್ರೀ ದೇವರ ಓಲಗ ಮಂಟಪದಲ್ಲಿ ಸಮರ್ಪಿಸಿದರು. ಬಳಿಕ ವಾದ್ಯಘೋಷಗಳೊಂದಿಗೆ ಓಲಗ ಮಂಟಪದಿಂದ ದೇವಸ್ಥಾನದವರೆಗೆ ಬಿಲ್ವಪತ್ರೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಪ್ರಧಾನ ಅರ್ಚಕ ವೇದಮೂರ್ತಿ ಜೈರಾಮ ಅಡಿ, ಅರ್ಚಕ ವೃಂದ ಹಾಗೂ ಸೀಮಾ ಸಮಿತಿಯ ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾದ ಭವ್ಯ ಬಿಲ್ವಾರ್ಚನೆ 11.30ರ ವರೆಗೆ ನಡೆಯಿತು. ಬಳಿಕ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನೆರವೇರಿಸಲಾಯಿತು.

ಬಿಲ್ವಾರ್ಚನೆ ಹಾಗೂ ಮಹಾಪೂಜೆಯಲ್ಲಿ 2 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಮಹಾ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಶ್ರೀ ದೇವರ ಮುಡಿಗಂಧ ಪ್ರಸಾದ, ಅನ್ನಪ್ರಸಾದ ಹಾಗೂ ಬಿಲ್ವಪ್ರಸಾದ ಸ್ವೀಕರಿಸಿದರು.

Edited By :
PublicNext

PublicNext

07/09/2026 07:20 pm

Cinque Terre

9.11 K

Cinque Terre

0

ಸಂಬಂಧಿತ ಸುದ್ದಿ