ಶಿರಸಿ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಇಂಥ ವೇದಿಕೆಗಳು ಅತ್ಯಗತ್ಯ. ಇಂಥ ಅರ್ಥಪೂರ್ಣವಾದ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಮನೆಯಲ್ಲಿ ತಾವು ಸಹ ಸಾಂಪ್ರದಾಯಿಕ ಮಲೆನಾಡು ಭಾಗದ ಕಜ್ಜಾಯಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ತರುವುದರ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕು ಎಂದು ತೋಟಗಾರರ ಕಲ್ಯಾಣ ಸಂಘ ಉಪಾಧ್ಯಕ್ಷ ಎಂ.ವಿ. ಜೋಶಿ ಅಭಿಪ್ರಾಯಪಟ್ಟರು.
ಅವರು ನಗರದ ತೋಟಗಾರರ ಕಲ್ಯಾಣ ಸಂಘ ಶಿರಸಿ, ವನಸ್ತ್ರೀ ಸಂಸ್ಥೆ ಉತ್ತರಕನ್ನಡ ಸಾವಯವ ಒಕ್ಕೂಟ ಮತ್ತು ನೆಲಸಿರಿ ಎಫ್.ಪಿ.ಸಿ. ಇವರ ಸಂಯುಕ್ತ ಆಶ್ರಯದಲ್ಲಿ ಮಲೆನಾಡ ಸೊಗಡು, ಕಜ್ಜಾಯ ಹಾಗೂ ಚೌತಿ ಕಜ್ಜಾಯಗಳ ಸ್ಪರ್ಧೆ, ಕಲಿಕೆ, ಕೈ ಚಕ್ಕುಲಿ ಕಂಬಳ, ತರಕಾರಿ, ಹೂವಿನ ಗಿಡಗಳು, ಬೀಜ ಹಾಗೂ ಗೃಹೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಬುಧವಾರ ಶ್ರೀಪಾದ ಹೆಗಡೆ ಕಡವೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ವೇದಾ ಹೆಗಡೆ ನೀರ್ನಳ್ಳಿ ಅವರು, ಸಂಘಟನೆಗಳ ಮೂಲಕ ಮಲೆನಾಡ ಸೊಗಡಿನ ಸಾಂಪ್ರದಾಯಿಕ ವಿಶೇಷ ಖಾದ್ಯಗಳನ್ನು ತಯಾರಿಸಿ ದೇಶ ವಿದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ಇದು ನಮಗಷ್ಟೇ ಸೀಮಿತವಾಗದೆ ಇನ್ನೂ ಅನೇಕ ಮಹಿಳೆಯರು ಇದರ ಲಾಭ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇದೊಂದು ವೇದಿಕೆಯಾಗಿದೆ ಎಂದು ಹೇಳಿದರು.
ಅಲ್ಲದೆ ಮಲೆನಾಡ ಭಾಗದ ಸಾಂಪ್ರದಾಯಿಕ ಕಜ್ಜಾಯಗಳ ಉಳಿವಿಗಾಗಿ ಮತ್ತು ಜನರಿಗೆ ಪರಿಚಯಿಸುವುದಕ್ಕಾಗಿ ನಾವು ಹಲವಾರು ಕಡೆಗಳಲ್ಲಿ ನಮ್ಮ ಸಂಘ ಸಂಸ್ಥೆಗಳಿಂದ ಅನೇಕ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದನ ಶಾಲೆಯ ಮಾಲೀಕರಾದ ಎಲ್.ಎಂ. ಹೆಗಡೆ, ಎಂ.ಪಿ. ಹೆಗಡೆ, ಅಂಜನಾ ಹೆಗಡೆ ಶೈಲ, ಶೈಲಜಾ ಗೋರ್ನ ಮನೆ, ವಿಕಾಸ ಹೆಗಡೆ ಸೇರಿದಂತೆ ಅನೇಕರು ಇದ್ದರು.
Kshetra Samachara
09/09/2026 07:31 pm
LOADING...