ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರದಲ್ಲಿ ಬೆದರಿಕೆ ಹೆಚ್ಚಳ; ಪಂಡಿತ್ ನೌಕರರಿಂದ ‘ವರ್ಕ್ ಫ್ರಂ ಹೋಮ್’ಗೆ ಒತ್ತಾಯ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಅಲ್ಪಸಂಖ್ಯಾತ ಪಂಡಿತ್ ನೌಕರರನ್ನು ಗುರಿಯಾಗಿಸಿಕೊಂಡು ಆನ್‌ಲೈನ್‌ನಲ್ಲಿ ಉಗ್ರರ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಾಶ್ಮೀರ ಪಂಡಿತ್ ನೌಕರರು ‘ವರ್ಕ್ ಫ್ರಂ ಹೋಮ್’ ವ್ಯವಸ್ಥೆ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.

ಜಮ್ಮು-ಕಾಶ್ಮೀರ ಸರ್ಕಾರದ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪತ್ರವೊಂದು ಹರಿದಾಡಿತ್ತು. ಇದರಲ್ಲಿ ನೌಕರರ ಹೆಸರು, ಮೊಬೈಲ್ ಸಂಖ್ಯೆ, ಮನೆ ವಿಳಾಸ ಹಾಗೂ ವಾಹನ ನೋಂದಣಿ ಸಂಖ್ಯೆಯಂತಹ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲಾಗಿತ್ತು ಎಂದು ವರದಿಯಾಗಿದೆ.

ಬೆದರಿಕೆ ಪತ್ರದ ಬಳಿಕ ಕೆಲವು ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಮೌಖಿಕವಾಗಿ ಸೂಚಿಸಲಾಗಿತ್ತು ಎನ್ನಲಾಗಿದೆ. ಆದರೆ, ಬೆದರಿಕೆಗಳು ಇಲ್ಲಿಗೆ ನಿಂತಿಲ್ಲ. ಕಾಶ್ಮೀರ ಕಣಿವೆಯಲ್ಲಿ ಹತ್ಯೆಗೀಡಾದ ಕಾಶ್ಮೀರಿ ಹಿಂದೂಗಳಿಗೆ ಸಂಬಂಧಿಸಿದ ಹಳೆಯ ಪ್ರಕರಣಗಳನ್ನು ಮರುತೆರೆಯಲಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಬೆದರಿಕೆ ಪೋಸ್ಟರ್ ಹರಿದಾಡಿದೆ.

ನಿರಂತರ ಬೆದರಿಕೆಗಳ ಹಿನ್ನೆಲೆಯಲ್ಲಿ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತ ಸರ್ಕಾರಿ ನೌಕರರ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ. ತಮ್ಮ ಭದ್ರತೆಯನ್ನು ಖಚಿತಪಡಿಸುವವರೆಗೆ ಸಂಪೂರ್ಣ ‘ವರ್ಕ್ ಫ್ರಂ ಹೋಮ್’ ವ್ಯವಸ್ಥೆ ಕಲ್ಪಿಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

Edited By :
PublicNext

PublicNext

09/09/2026 05:07 pm

Cinque Terre

20.17 K

Cinque Terre

0

ಸಂಬಂಧಿತ ಸುದ್ದಿ