ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ, ಸುಮಾರು ಬಸ್‌ಗಳನ್ನು ತಡೆದು ಹೋರಾಟ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಲಕ್ಕುಂಡಿ ಗ್ರಾಮದಿಂದ ಗದಗ ನಗರಕ್ಕೆ ನಿತ್ಯ ಕಾಲೇಜಿಗಾಗಿ ಸಾವಿರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಆದರೆ ಬಹುತೇಕ ಬಸ್‌ಗಳು ಬೈಪಾಸ್ ಮೂಲಕ ಸಂಚರಿಸುವುದರಿಂದ ಕಾಲೇಜಿಗೆ ಹೋಗಲು ಸಮಸ್ಯೆಯಾಗ್ತಿದೆ. ಸಾರಿಗೆ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳಿಗೆ ಪರದಾಟವಾಗಿದ್ದು, ಶಾಲಾ-ಕಾಲೇಜಿಗೆ ಸಮಯಕ್ಕೆ ಸಮರ್ಪಕವಾಗಿ ತೆರಳಲು ಆಗದೆ ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಬೈಪಾಸ್ ಮೂಲಕ ತೆರಳುವ ಬಸ್‌ಗಳು ಲಕ್ಕುಂಡಿ ಮಾರ್ಗವಾಗಿಯೇ ಸಂಚರಿಸಬೇಕು ಎಂದು ಘೋಷಣೆ ಕೂಗಿ ಪಟ್ಟು ಹಿಡಿದ ವಿದ್ಯಾರ್ಥಿಗಳು, ಲಕ್ಕುಂಡಿ–ಗದಗ ನಡುವೆ ಪರ್ಯಾಯ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶಿತರಾಗಿದ್ದರಿಂದ ಸ್ಥಳದಲ್ಲಿ ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಲಕ್ಕುಂಡಿ ಬಸ್ ನಿಲ್ದಾಣದ ಬಳಿ ಆರೇಳು ಬಸ್‌ಗಳನ್ನು ವಿದ್ಯಾರ್ಥಿಗಳು ತಡೆದು ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
PublicNext
11/09/2026 02:54 pm
LOADING...