ಗದಗ : ಶಿಗ್ಲಿ ಗ್ರೂಪ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬಾಲಕರ ವಿಭಾಗದಲ್ಲಿ ವಾಲಿಬಾಲ್, 400×4 ಮೀಟರ್ ರಿಲೇ ಹಾಗೂ 100×4 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಶಾಲೆಯ ತಂಡಗಳು ಪ್ರಥಮ ಸ್ಥಾನ ಪಡೆದು ಶಾಲೆಗೆ ವೀರಾಗ್ರಣಿ ಗೌರವ ತಂದುಕೊಟ್ಟಿವೆ. ವೈಯಕ್ತಿಕ ವಿಭಾಗದಲ್ಲಿ ಕು. ಉಂಡಿ 100 ಮೀಟರ್, 200 ಮೀಟರ್ ಓಟ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸರಪಳಿ ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಕುಮಾರ್ ಅಜಾದ್ ಸೂರಣಗಿ, ಅಡೆತಡೆ ಓಟ ಹಾಗೂ ಗುಂಡು ಎಸೆತದಲ್ಲಿ ಕು. ಫಯಾಜ್ ನದಾಫ್, ಬಚ್ಚಿ ಎಸೆತದಲ್ಲಿ ಶಿವರಾಜ್ ವಾಲಿಕರ್, 3000 ಮೀಟರ್ ಓಟದಲ್ಲಿ ವಿವೇಕ್ ಬಾರ್ಕಿ ಹಾಗೂ 400 ಮೀಟರ್ ಓಟದಲ್ಲಿ ಮನೋಜ್ ಹೊನ್ನಿಕೊಪ್ಪ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿಯೂ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಖೋ-ಖೋ, 4×100 ಮೀಟರ್ ಹಾಗೂ 4×400 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ವೀರಾಗ್ರಣಿ ಗೌರವ ತಂದುಕೊಟ್ಟಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ 800 ಮೀಟರ್, 1500 ಮೀಟರ್ ಓಟ ಹಾಗೂ ತ್ರಿವಿಧ ಜಿಗಿತದಲ್ಲಿ ಕುಮಾರಿ ಕಲ್ಪನಾ ಲಮಾಣಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. 200 ಮೀಟರ್, 400 ಮೀಟರ್ ಓಟ ಹಾಗೂ ಎತ್ತರ ಜಿಗಿತದಲ್ಲಿ ಕುಮಾರಿ ಸರಸ್ವತಿ ಲಮಾಣಿ, ಸರಪಳಿ ಗುಂಡು ಎಸೆತದಲ್ಲಿ ಕುಮಾರಿ ರೇಣುಕಾ ಹುಳ್ಳಿಕೊಪ್ಪಿ, ಚಕ್ರ ಎಸೆತದಲ್ಲಿ ಸುಮಯ್ಯ ಮತ್ತೂರ್, 400 ಮೀಟರ್ ಓಟದಲ್ಲಿ ಗಂಗವ್ವ ಕೊಪ್ಪಳ, 100 ಮೀಟರ್ ಓಟ ಹಾಗೂ ಉದ್ದ ಜಿಗಿತದಲ್ಲಿ ವರ್ಷಾ ಮಟ್ಟಿ ಮತ್ತು ಅಡೆತಡೆ ಓಟದಲ್ಲಿ ಅಪ್ಸಾನ ನದಾಫ್ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಗ್ರಾಮಭಾರತಿ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ಚೇರ್ಮನ್ ಎಸ್.ಪಿ. ಬಳಿಗಾರ, ಗೌರವ ಕಾರ್ಯದರ್ಶಿ ಸಿ.ಎಂ. ರಾಗಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಶಾಲೆಯ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
18/09/2026 12:54 pm