ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ತರಗತಿ ನಡೆಯುತ್ತಿರುವಾಗಲೇ ಕುಸಿದ ಶಾಲಾ ಮೇಲ್ಚಾವಣಿ!; ಮಕ್ಕಳು ಸೇಫ್

ಗದಗ: ತರಗತಿ ನಡೆಯುವ ವೇಳೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮೇಲ್ಚಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ಹೌದು! ಈ ಘಟನೆಯು ಗದಗ ತಾಲೂಕಿನ ದುಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸದ್ಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ ಎಂಬುದು ತಿಳಿದು ಬಂದಿದೆ.

ಈ ಶಾಲೆಯ ಕಟ್ಟಡವು ಸುಮಾರು 50 ವರ್ಷಕ್ಕಿಂತಲೂ ಹಳೆಯದಾಗಿದೆ. ಅಲ್ಲದೆ, ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ತಕ್ಷಣವೇ ಶಾಲೆಯ ದುರಸ್ತಿ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Edited By :
PublicNext

PublicNext

11/09/2026 07:06 pm

Cinque Terre

11.42 K

Cinque Terre

1

ಸಂಬಂಧಿತ ಸುದ್ದಿ