ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ರೈತರ ಪರ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಪಾದಯಾತ್ರೆಯಲ್ಲೇ ರೈತರ ಮೇಲೆ ಹಲ್ಲೆ

ಬಳ್ಳಾರಿ: ರೈತರ ಸಮಸ್ಯೆಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಬಳ್ಳಾರಿ ಚಲೋ ಪಾದಯಾತ್ರೆ ನಡೆಸಿದ ಬಿಜೆಪಿ ನಾಯಕರಿಗೆ ಇದೀಗ ಮುಜುಗರದ ಪ್ರಶ್ನೆ ಎದುರಾಗಿದೆ. ಪಾದಯಾತ್ರೆ ಸಾಗುತ್ತಿದ್ದ ವೇಳೆ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿ ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಆರೋಪ ಕೇಳಿಬಂದಿದೆ.

ರೈತರ ಜಮೀನಿನ ಬಳಿ ಪಾದಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಕೆಲ ಬಿಜೆಪಿ ಕಾರ್ಯಕರ್ತರು ರೈತರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರೈತರಿಗೆ ಹಿಗ್ಗಾಮುಗ್ಗಾ ಗುದ್ದಾಟ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆ ವೇಳೆ ಪೊಲೀಸರು ಹಾಗೂ ಕೆಲವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ರೈತರ ನೋವು, ಬೆವರು ಮತ್ತು ಜಮೀನಿನ ಹಕ್ಕುಗಳ ಬಗ್ಗೆ ಮಾತನಾಡುವ ಪಕ್ಷದ ಕಾರ್ಯಕರ್ತರೇ ರೈತರೊಂದಿಗೆ ಕೈಕೈ ಮಿಲಾಯಿಸುವ ಪರಿಸ್ಥಿತಿ ಬಂದಿದ್ದರೆ, ಇದಕ್ಕೆ ಹೊಣೆ ಯಾರು? ಘಟನೆಗೆ ನಿಖರ ಕಾರಣವೇನು? ಯಾರಿಂದ ಮೊದಲು ಗಲಾಟೆ ಆರಂಭವಾಯಿತು? ಹಲ್ಲೆ ನಡೆದಿದೆಯೇ? ನಡೆದಿದ್ದರೆ ಯಾರು ನಡೆಸಿದರು? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಸ್ಪಷ್ಟ ಉತ್ತರ ಸಿಗಬೇಕಿದೆ. ರೈತರ ಪರ ಎಂದು ಬೊಬ್ಬೆ ಹೊಡೆಯುವುದಷ್ಟೇ ಸಾಕಾ? ರೈತರ ಗೌರವ ಮತ್ತು ಹಕ್ಕುಗಳನ್ನು ಕಾಪಾಡುವುದು ಕೂಡ ರೈತಪರ ರಾಜಕಾರಣದ ಭಾಗವಲ್ಲವೇ?

ಹೊನ್ನುರಸ್ವಾಮಿ ಕೆ.ಟಿ. ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ

Edited By :
PublicNext

PublicNext

11/09/2026 04:07 pm

Cinque Terre

5.83 K

Cinque Terre

0

ಸಂಬಂಧಿತ ಸುದ್ದಿ