ಬಳ್ಳಾರಿ: ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಮಳೆರಾಯನ ಆಗಮನ ಕೊಂಚ ನೆಮ್ಮದಿ ತಂದಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ತಾಪ, ಗಣಿ ಧೂಳು ಹಾಗೂ ನೀರಿನ ಸಮಸ್ಯೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರು.
ನಗರದಲ್ಲಿ ಸಂಚರಿಸುವವರಿಗೆ ಗಣಿ ಧೂಳು ಕಿರಿಕಿರಿ ಉಂಟುಮಾಡುತ್ತಿದ್ದರೆ, ಜಾನುವಾರುಗಳು ಹಾಗೂ ಪಕ್ಷಿಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಗಣೇಶ ಹಬ್ಬದ ಸಂಭ್ರಮದ ಬೆನ್ನಲ್ಲೇ ಬಳ್ಳಾರಿಯಲ್ಲಿ ಮಳೆ ಸುರಿದಿದ್ದು, ಬಿಸಿಲಿನ ಬೇಗೆಗೆ ಬೆಂದಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಳೆ ಬಂದರೆ ಸಾಕು ಎನ್ನುವಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಬರದ ಛಾಯೆಯ ನಡುವೆ ವರುಣನ ಆಗಮನ... ಬಳ್ಳಾರಿಯ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ವರದಿ: ಹೊನ್ನುರಸ್ವಾಮಿ ಕೆ.ಟಿ.,
ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ
PublicNext
18/09/2026 07:55 am
LOADING...