ಸಿರುಗುಪ್ಪ ತಾಲೂಕಿನ ವರಮಯ್ಯ ಕ್ಯಾಂಪ್ ನಿವಾಸಿಗಳ ಬದುಕು ಮೂಲಸೌಕರ್ಯಗಳ ಕೊರತೆಯಿಂದ ನರಕಯಾತನೆಯಾಗಿದೆ.
ಜಲಜೀವನ್ ಮಿಷನ್ ಹೆಸರಿನಲ್ಲಿ ಮನೆಮನೆಗೆ ನಳ ಸಂಪರ್ಕ ನೀಡಲಾಗಿದೆ. ಆದರೆ ಶುದ್ಧ ನೀರು ನೀಡುವ ವ್ಯವಸ್ಥೆ ಮಾತ್ರ ಇಲ್ಲ! ಕೆಸರು ಮಿಶ್ರಿತ ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿನ ಕೆರೆಗೆ ರಕ್ಷಣಾಗೋಡೆಯಿಲ್ಲ, ಸ್ವಚ್ಛತೆಯೂ ಇಲ್ಲ. ಮತ್ತೊಂದೆಡೆ, ಮಳೆ ಬಂದರೆ ಕ್ಯಾಂಪ್‌ನ ಸಂಪರ್ಕ ರಸ್ತೆ ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಇದೇ ರಸ್ತೆಯಲ್ಲಿ ಮಕ್ಕಳು ಶಾಲೆಗೆ ತೆರಳಬೇಕಾದ ಪರಿಸ್ಥಿತಿ!
ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಜನರಿಗೆ ಶುದ್ಧ ನೀರು, ಸುಸಜ್ಜಿತ ರಸ್ತೆ ಕೊಡಲೂ ಸಾಧ್ಯವಾಗದಿದ್ದರೆ, ಸರ್ಕಾರದ ಯೋಜನೆಗಳು ಯಾರಿಗಾಗಿ?
ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಈಗಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾರ, ಕೆರೆ ಖಾಸಗಿ ಜಮೀನಿನಲ್ಲಿರುವುದರಿಂದ ಅಭಿವೃದ್ಧಿಗೆ ತೊಂದರೆಯಿದ್ದು, ಕಂದಾಯ ಗ್ರಾಮ ಘೋಷಣೆಯ ಬಳಿಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದಿದ್ದಾರೆ.
ವರದಿ : ಹೊನ್ನುರಸ್ವಾಮಿ ಕೆ. ಟಿ. ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ.
PublicNext
16/09/2026 10:52 pm
LOADING...