ಬಳ್ಳಾರಿ: ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯಲ್ಲಿರುವ KRS ಫಂಕ್ಷನ್ ಹಾಲ್‌ನಲ್ಲಿ ಸೆಪ್ಟೆಂಬರ್ 18ರಿಂದ 20ರ ವರೆಗೆ ಮೂರು ದಿನಗಳ ಧ್ಯಾನ ಶಿಬಿರ ಆಯೋಜಿಸಲಾಗಿದೆ.
ಪಿರಮಿಡ್ ಧ್ಯಾನ ಮಾಸ್ಟರ್ ಹಾಗೂ ಯೋಗಿ ಗ್ರ್ಯಾಂಡ್ ಮಾಸ್ಟರ್ ಅರುಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಧ್ಯಾನದ ವಿಧಾನ, ಮಹತ್ವ ಹಾಗೂ ಧ್ಯಾನದಿಂದ ದೊರೆಯಬಹುದಾದ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ.
ಧ್ಯಾನದ ಮೂಲಕ ಮನಸ್ಸಿನ ಏಕಾಗ್ರತೆ ಹೆಚ್ಚಿಸಿಕೊಳ್ಳುವುದು, ಒತ್ತಡದಿಂದ ಮುಕ್ತವಾಗಿ ನೆಮ್ಮದಿಯ ಜೀವನ ನಡೆಸುವುದು ಹಾಗೂ ಆತ್ಮಜ್ಞಾನದ ಕಡೆಗೆ ಸಾಗುವ ಕುರಿತು ಶಿಬಿರದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಕುರಿತು ಬಳ್ಳಾರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿರಮಿಡ್ ಧ್ಯಾನಕೇಂದ್ರದ ಸದಸ್ಯರಾದ ಸುಭಾಷ್ ಪತ್ರೀಜಿ, ಮೂರು ದಿನಗಳ ಕಾರ್ಯಕ್ರಮದ ಉದ್ದೇಶ ಹಾಗೂ ಧ್ಯಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ವಿಶ್ವಲ್ಸ್ ಪ್ಲೋ...
ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧ್ಯಾನದ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ವರದಿ: ಹೊನ್ನುರಸ್ವಾಮಿ ಕೆ.ಟಿ.,
ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ
PublicNext
16/09/2026 11:23 pm
LOADING...