ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಬಳ್ಳಾರಿ ಚಲೋಗೆ ಜನಸಾಗರವೇ? ಹಣ–ಊಟದ ಆಮಿಷವೇ?

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಪಾದಯಾತ್ರೆ ಇಂದು ಬಳ್ಳಾರಿಯಲ್ಲಿ ಸಮಾರೋಪಗೊಂಡಿದೆ.

ಬೃಹತ್ ಜನಸಾಗರದೊಂದಿಗೆ ಬಳ್ಳಾರಿ ಚಲೋ ಯಶಸ್ವಿಯಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿರುವ ಬೆನ್ನಲ್ಲೇ, ಸಮಾವೇಶಕ್ಕೆ ಬಂದಿದ್ದ ಕೆಲವರು ಮಾಡಿರುವ ಆರೋಪಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.

ಊಟ ಕೊಡುತ್ತೇವೆ... ಹಣ ಕೊಡುತ್ತೇವೆ ಎಂದು ಹೇಳಿ ನಮ್ಮನ್ನು ಕರೆತಂದರು. ಆದರೆ ಇಲ್ಲಿಗೆ ಬಂದ ಮೇಲೆ ಊಟವೂ ಇಲ್ಲ, ಹಣವೂ ಇಲ್ಲ ಎಂದು ವೃದ್ಧರು, ಮಹಿಳೆಯರು ಸೇರಿದಂತೆ ಕೆಲವರು ಅಳಲು ತೋಡಿಕೊಂಡಿದ್ದಾರೆ.

ಇನ್ನು ಕೆಲವರು ₹200, ₹300, ₹400 ನೀಡುವುದಾಗಿ ಹೇಳಲಾಗಿತ್ತು ಎಂದು ಆರೋಪಿಸಿದ್ದಾರೆ. ಮಧ್ಯಾಹ್ನದವರೆಗೂ ಊಟವಿಲ್ಲದೆ ಕಾಯಬೇಕಾಯಿತು ಎಂಬ ಆರೋಪವೂ ಕೇಳಿಬಂದಿದೆ.

ಸಣ್ಣ ಮಕ್ಕಳನ್ನು ಎತ್ತಿಕೊಂಡು ಬಂದಿದ್ದ ಮಹಿಳೆಯರೂ ಇದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ಸಮಾವೇಶದ ಸ್ಥಳದಲ್ಲಿ ಹಲವೆಡೆ ಖಾಲಿ ಕುರ್ಚಿಗಳು ಕಂಡುಬಂದಿರುವುದು ಕೂಡ ಬಿಜೆಪಿ ಹೇಳುತ್ತಿರುವ ಜನಸಾಗರದ ಲೆಕ್ಕಾಚಾರದ ಬಗ್ಗೆ ಪ್ರಶ್ನೆ ಮೂಡಿಸಿದೆ.

ಹಾಗಾದರೆ...

ಬಳ್ಳಾರಿ ಚಲೋಗೆ ನಿಜವಾಗಿಯೂ ಸ್ವಯಂಪ್ರೇರಿತವಾಗಿ ಜನ ಸೇರಿದ್ದರಾ?

ಅಥವಾ...

ಹಣ ಮತ್ತು ಊಟದ ಆಮಿಷವೊಡ್ಡಿ ಜನರನ್ನು ಕರೆತರಲಾಗಿತ್ತಾ?

ಈ ಆರೋಪಗಳಿಗೆ ಬಿಜೆಪಿ ನಾಯಕರು ಏನು ಉತ್ತರ ಕೊಡುತ್ತಾರೆ?

ಜನಸಾಗರದ ಬಗ್ಗೆ ರಾಜಕೀಯ ಪಕ್ಷಗಳು ಹೇಳಿಕೊಳ್ಳುವ ಲೆಕ್ಕಕ್ಕಿಂತ, ಸಮಾವೇಶಕ್ಕೆ ಬಂದ ಜನರ ಅಳಲು ಮತ್ತು ಖಾಲಿ ಕುರ್ಚಿಗಳ ಚಿತ್ರಣವೇ ಈಗ ಬಳ್ಳಾರಿ ಚಲೋದ ಮತ್ತೊಂದು ಮುಖವನ್ನು ತೋರಿಸುತ್ತಿದೆಯೇ?

ಈ ಆರೋಪಗಳ ಸತ್ಯಾಸತ್ಯತೆ ಏನು ಎಂಬುದು ಸಂಬಂಧಪಟ್ಟವರ ಸ್ಪಷ್ಟನೆಯಿಂದಲೇ ತಿಳಿಯಬೇಕಿದೆ.

ವರದಿ : ಹೊನ್ನುರಸ್ವಾಮಿ ಕೆ. ಟಿ.

ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ.

Edited By :
PublicNext

PublicNext

12/09/2026 05:11 pm

Cinque Terre

10.67 K

Cinque Terre

1

ಸಂಬಂಧಿತ ಸುದ್ದಿ