ಶಿವಮೊಗ್ಗ: ಕಾಡುಪ್ರಾಣಿಯೊಂದನ್ನು ರಕ್ಷಿಸಲು ಹೋಗಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಕಾರಿನ ಮೇಲೆಯೇ ಬಿದ್ದರೂ, ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಯಾವುದೇ ಅಪಾಯವಿಲ್ಲದೆ ಪವಾಡಸಾದೃಶವಾಗಿ ಪಾರಾಗಿದ್ದಾರೆ.
ಮಣಿಪಾಲದಿಂದ ಸಾಗರ ಕಡೆಗೆ ತೆರಳುತ್ತಿದ್ದ ಕಾರು, ನಗರ-ಮಾಸ್ತಿಕಟ್ಟೆ ಮಾರ್ಗದ ನೂಲಿಗೇರಿ ಅಬ್ಬಾಸ್ ಎಂಬುವವರ ಮನೆಯ ಎದುರು ತಲುಪುತ್ತಿದ್ದಂತೆ ದಿಢೀರನೆ ಕಾಡುಪ್ರಾಣಿಯೊಂದು ರಸ್ತೆಗೆ ಅಡ್ಡಬಂದಿದೆ. ಈ ವೇಳೆ ಪ್ರಾಣಿಯನ್ನು ಉಳಿಸಲು ಚಾಲಕ ಪ್ರಯತ್ನಿಸಿದಾಗ, ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ನೇರವಾಗಿ ಡಿಕ್ಕಿಯಾಗಿದೆ.
ಡಿಕ್ಕಿ ಹೊಡೆದ ತಕ್ಷಣ ವಿದ್ಯುತ್ ಕಂಬ ಕಾರಿನ ಮೇಲೆಯೇ ಧರೆಗುರುಳಿದೆ. ಕಾರಿನಲ್ಲಿ ಸಾಗರ ನಿವಾಸಿ ಪ್ರಕಾಶ್ ಹಾಗೂ ಮೂವರು ಮಕ್ಕಳು ಸೇರಿದಂತೆ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಿವಾನಂದ ಕೋಳಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Kshetra Samachara
13/09/2026 12:06 pm
LOADING...